ವಾಷಿಂಗ್ಟನ್: ಯು.ಎಸ್.ಮಿಲಿಟರಿ ಜನರಲ್ಗಳು ಬೈರುತ್ ದುರಂತವನ್ನು 'ಭಯಾನಕ ದಾಳಿ' ಎಂದು ಭಾವಿಸುತ್ತಿದ್ದಾರೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಬೈರುತ್ ಸ್ಫೋಟ 'ದಾಳಿ' ಎಂದು ಅಮೆರಿಕದ ಜನರಲ್ಗಳು ಭಾವಿಸುತ್ತಾರೆ: ಟ್ರಂಪ್ - ಬೈರುತ್ ಸ್ಫೋಟ
ನಾನು ನಮ್ಮ ಸೇನೆಯ ಕೆಲವು ಜನರಲ್‌ಗಳನ್ನು ಭೇಟಿಯಾದ್ದು, ಅವರು ಈ ಘಟನೆಯನ್ನು ದಾಳಿಯೆಂದು ಭಾವಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಳಿದ್ದಾರೆ.
![ಬೈರುತ್ ಸ್ಫೋಟ 'ದಾಳಿ' ಎಂದು ಅಮೆರಿಕದ ಜನರಲ್ಗಳು ಭಾವಿಸುತ್ತಾರೆ: ಟ್ರಂಪ್ blast](https://etvbharatimages.akamaized.net/etvbharat/prod-images/768-512-8298971-824-8298971-1596617027039.jpg)
blast
ಆದರೆ ಈ ಸ್ಫೋಟದ ಹಿಂದಿನ ಕಾರಣ ಇನ್ನೂ ತಿಳಿದಿಲ್ಲ ಎಂದು ಲೆಬನಾನಿನ ಅಧಿಕಾರಿಗಳು ಹೇಳಿದ್ದಾರೆ.
ಸಂತ್ರಸ್ತರಿಗೆ ಸಂತಾಪ ಸೂಚಿಸಿದ ಟ್ರಂಪ್, ಲೆಬನಾನ್‌ಗೆ ಸಹಾಯ ಮಾಡಲು ಅಮೆರಿಕ ಸಿದ್ಧವಾಗಿದೆ ಎಂದು ಅವರು ಹೇಳಿದರು.