ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಸ್ಯ ಪ್ರಿಯರೂ ಹೌದು. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ಮಾಡುವಾಗ ಮೋದಿ ಅವರ ಕಾಲೆಳೆದು ತಮಾಷೆ ಮಾಡಿದ್ದರು.
ಟ್ರಂಪ್ ಅವರು ಭಾರತಕ್ಕೆ ಕೆಲವೇ ಗಂಟೆಗಳ ಮುನ್ನ ಬಾಹುಬಲಿ ಅವತಾರ ತಾಳಿದ್ದಾರೆ. ಇದೇನಪ್ಪಾ ಟ್ರಂಪ್ ಅವರು ಸೂಟ್ ಧರಿಸಿ ಭಾರತಕ್ಕೆ ಬರುತ್ತಿಲ್ವಾ ಅಂತೀರಾ?
ವಿಷಯ ಅದಲ್ಲ. ಟ್ರಂಪ್ ಅವರು ಭಾರತಕ್ಕೆ ಭೇಟಿ ನೀಡುವ ಮುನ್ನ ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ರೋಲ್ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಟ್ರಂಪ್ ಅವರನ್ನು ಬಾಹುಬಲಿಯಂತೆ ಮಾರ್ಫ್ ಮಾಡಲಾಗಿರುವ ಈ ದೃಶ್ಯ ತುಣುಕನ್ನು ನೋಡಿ ಎಂಜಾಯ್ ಮಾಡಿರುವ ದೊಡ್ಡಣ್ಣ, 'ಭಾರತದಲ್ಲಿರುವ ನನ್ನ ಉತ್ತಮ ಸ್ನೇಹಿತರೊಂದಿಗೆ ಇರಲು ಎದುರುನೋಡುತ್ತಿದ್ದೇನೆ' ಎಂದು ಬರೆದುಕೋಂಡಿದ್ದಾರೆ.