ವಾಷಿಂಗ್ಟನ್ ಡಿಸಿ(ಯುಎಸ್ಎ): ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿನ್ನೆ ವಾಲ್ಟರ್ ರೀಡ್ ರಾಷ್ಟ್ರೀಯ ಮಿಲಿಟರಿ ವೈದ್ಯಕೀಯ ಕೇಂದ್ರದಿಂದ ಬಿಡುಗಡೆಗೊಂಡ ನಂತರ ಸೇನಾ ಹೆಲಿಕಾಪ್ಟರ್ನಲ್ಲಿ ಶ್ವೇತಭವನಕ್ಕೆ ಮರಳಿದ್ದಾರೆ. ಅಲ್ಲಿ ಅವರು ಕೋವಿಡ್-19ಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಅಧ್ಯಕ್ಷ ಟ್ರಂಪ್ ಸಂಪೂರ್ಣವಾಗಿ ಇನ್ನೂ ಕೂಡ ಕೊರೊನಾದಿಂದ ಗುಣಮುಖರಾಗಿಲ್ಲ ಎಂದು ಶ್ವೇತಭವನದ ವೈದ್ಯ ಡಾ. ಸೀನ್ ಕಾನ್ಲೆ ಹೇಳಿದ್ದರೂ ಕೂಡ ಟ್ರಂಪ್ ಶ್ವೇತಭವನವನ್ನು ತಲುಪಿದ ಕೂಡಲೇ ತಮ್ಮ ಮಾಸ್ಕ್ ಕೂಡ ತೆಗೆದಿದ್ದಾರೆ. ವಾಲ್ಟರ್ ರೀಡ್ ವೈದ್ಯಕೀಯ ಕೇಂದ್ರದಲ್ಲಿ ಟ್ರಂಪ್, ಉತ್ತಮ ಚಿಕಿತ್ಸೆಗೆ ಒಳಗಾಗಿದ್ದರು. ಅವರು ಇನ್ನೂ ಕೂಡ ಕೋವಿಡ್ನಿಂದ ಸಂಪೂರ್ಣವಾಗಿ ಗುಣಮುಖರಾಗಿಲ್ಲದ ಹಿನ್ನೆಲೆ ಅವರಿಗೆ ವಿಶ್ವದರ್ಜೆಯ ಚಿಕಿತ್ಸಾ ಆರೈಕೆ ಇರಲಿದೆ ಎಂದು ಎಂದು ಶ್ವೇತಭವನದ ವೈದ್ಯ ಡಾ. ಸೀನ್ ಕಾನ್ಲೆ ಹೇಳಿದ್ದಾರೆ.