ಕರ್ನಾಟಕ

karnataka

ETV Bharat / international

ಅರ್ಹತೆ, ಕೌಶಲ್ಯಾಧಾರಿತ ಗ್ರೀನ್‌ಕಾರ್ಡ್‌ ವಿತರಣೆಗೆ ಅಮೆರಿಕದ ಹೊಸ ವಲಸೆ ನೀತಿಯಲ್ಲಿ ಒತ್ತು - ಅಮೆರಿಕದಲ್ಲಿ ನೂತನ ವಲಸೆ ನೀತಿ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಶೀಘ್ರದಲ್ಲೇ ಅರ್ಹತೆ ಆಧಾರದ ವಲಸೆ ನೀತಿಯನ್ನು ಜಾರಿಗೆ ತರಲು ಉದ್ದೇಶಿಸಿದ್ದಾರೆ. ಅರ್ಹತೆ ಆಧಾರದ ನಿಯಮ ಬಂದರೆ ವಿದೇಶಿಗರಿಗೆ ಕೌಶಲ್ಯ ಆಧಾರಿತವಾಗಿ ಹೆಚ್ಚಿನ ಗ್ರೀನ್ ಕಾರ್ಡ್​, ವೀಸಾ ಲಭ್ಯವಾಗಲಿದೆ.

Trump promises 'strong' immigration act soon
ನೂತನ ವಲಸೆ ನೀತಿಗೆ ಟ್ರಂಪ್ ಚಿಂತನೆ

By

Published : Jul 15, 2020, 2:56 PM IST

Updated : Jul 15, 2020, 4:40 PM IST

ವಾಷಿಂಗ್ಟನ್:ಸೂಕ್ತದಾಖಲೆಗಳಿಲ್ಲದೆ ಅಮೆರಿಕಕ್ಕೆ ಬಂದು ನೆಲೆಸಿದ ಪೋಷಕರ ವಲಸಿಗ ಮಕ್ಕಳಿಗೆ ಕೆಲಸದ ಅನುಮತಿ ಮತ್ತು ಇತರ ರಕ್ಷಣೆ ಒದಗಿಸುವ ವಿಚಾರವನ್ನು ಅಮೆರಿಕದ ಹೊಸ ವಲಸೆ ನೀತಿ ಒಳಗೊಳ್ಳಲಿದೆ. ಈ ಹೊಸ ಕಾನೂನು ಸುಮಾರು 7 ಲಕ್ಷ ವಲಸಿಗರ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ

ಅರ್ಹತೆ ಆಧಾರದಲ್ಲಿ ಕಾನೂನು ಉನ್ನತ ಪದವೀಧರರು ಮತ್ತು ಆಯಾ ವೃತ್ತಿಗಳಿಗೆ ಅರ್ಹತೆ ಇರುವವರಿಗೆ ಸುಲಭವಾಗಿ ವೀಸಾ ದೊರೆಯುವಂತಾಗುತ್ತದೆ. ಇದು ಗ್ರೀನ್ ಕಾರ್ಡ್​ ವ್ಯವಸ್ಥೆಯಲ್ಲಿಯೂ ಬದಲಾವಣೆ ತರಲಿದೆ. ಸದ್ಯ ಹೆಚ್ಚಿನ ಗ್ರೀನ್ ಕಾರ್ಡ್​ಗಳನ್ನು ಕುಟುಂಬದ ಸಂಬಂಧಿಕರಿಗೆ ನೀಡಲಾಗುತ್ತಿದೆ. ಅರ್ಹತೆ ಆಧಾರದ ನಿಯಮ ಬಂದರೆ ಕೌಶಲ್ಯಾಧಾರಿತವಾಗಿ ಹೆಚ್ಚಿನ ಗ್ರೀನ್ ಕಾರ್ಡ್​ ಅಥವಾ ವೀಸಾ ಲಭ್ಯವಾಗಲಿದೆ.

ಶ್ವೇತ ಭವನದ ರೋಸ್ ಗಾರ್ಡನ್‌ನಲ್ಲಿ ಹೇಳಿಕೆ ನೀಡಿದ ಟ್ರಂಪ್ ಶೀಘ್ರದಲ್ಲೇ ಅರ್ಹತೆ ಆಧಾರಿತ ಹೊಸ ವಲಸೆ ನೀತಿಯನ್ನು ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ.

Last Updated : Jul 15, 2020, 4:40 PM IST

ABOUT THE AUTHOR

...view details