ಕರ್ನಾಟಕ

karnataka

ETV Bharat / international

ಶ್ವೇತಭವನ ಪ್ರಸ್ತಾವಿತ ಇಸ್ರೇಲ್, ಪ್ಯಾಲೆಸ್ಟೈನ್‌ ಗಡಿಗಳ ನಕ್ಷೆ ಬಿಡುಗಡೆ - Israeli and Palestinian states

ಮಂಗಳವಾರ ಶ್ವೇತಭವನದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್, ಪ್ಯಾಲೆಸ್ಟೈನ್ ದೇಶಗಳ ಗಡಿಗಳ ನಕ್ಷೆ ಬಿಡುಗಡೆ ಮಾಡಿದರು.

TRUMP-PALESTINE-3RDLD PEACE PLAN
ವೈಟ್ ಹೌಸ್ ಪ್ರಸ್ತಾವಿತ ಇಸ್ರೇಲಿ, ಪ್ಯಾಲೇಸ್ಟಿನಿಯನ್ ರಾಜ್ಯ ಗಡಿಗಳ ನಕ್ಷೆ ಬಿಡುಗಡೆ

By

Published : Jan 29, 2020, 11:27 AM IST

ವಾಷಿಂಗ್ಟನ್ (ಅಮೆರಿಕ): ಶ್ವೇತಭವನದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್, ಪ್ಯಾಲೆಸ್ಟೈನ್ ದೇಶಗಳ ಗಡಿಗಳ ನಕ್ಷೆ ಬಿಡುಗಡೆ ಮಾಡಿದರು.

ನಕ್ಷೆಯಲ್ಲಿ ಸುಮಾರು 15 ಇಸ್ರೇಲ್ ವಸಾಹತುಗಳನ್ನೊಳಗೊಂಡ ವೆಸ್ಟ್ ಬ್ಯಾಂಕ್ ಪ್ರದೇಶವು ಗಾಜಾ ಪಟ್ಟಿ ಪ್ರದೇಶವನ್ನು ಸಂಪರ್ಕಿಸುತ್ತದೆ. ಅದೂ ಕೂಡ ಒಂದು ಚಾನಲ್‌ನ ಮೂಲಕ ಮಾತ್ರ. ಈ ಮೂಲಕ ಪ್ಯಾಲೆಸ್ಟೈನ್ ರಾಷ್ಟ್ರದ ಭರವಸೆಯನ್ನು ಟ್ರಂಪ್ ತಾಂತ್ರಿಕವಾಗಿ ಪೂರೈಸುತ್ತಿದ್ದಾರೆ ಎನ್ನುವುದು ಕೆಲವು ಪ್ಯಾಲೆಸ್ಟೈನ್ ನಾಯಕರ ವಾದ.

ಪ್ಯಾಲೆಸ್ಟೈನ್ ಇಸ್ಲಾಮಿಸ್ಟ್​ಗಳಿಂದ ಹಮಾಸ್-ಟ್ರಂಪ್ ಒಪ್ಪಂದ ತಿರಸ್ಕಾರ:

ಶ್ವೇತಭವನದಲ್ಲಿ ನಡೆದ ಟ್ರಂಪ್​ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಾಮಿನ್ ನೇತನ್ಯಾಹು ಅವರ ಜಂಟಿ ಭಾಷಣದಲ್ಲಿ ಈ ಯೋಜನೆಯನ್ನು ಪ್ಯಾಲೆಸ್ಟೈನ್ ನಾಯಕರು ತಿರಸ್ಕರಿಸಿದ್ದಾರೆ.

ಇದೇ ವೇಳೆ ಜೆರುಸಲೆಮ್ ಇಸ್ರೇಲ್​ನ ಅವಿಭಜಿತ ರಾಜಧಾನಿಯಾಗಿ ಉಳಿಯುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು. ಹಾಗೆಯೇ ಇದನ್ನು "ಐತಿಹಾಸಿಕ" ಮತ್ತು ಶಾಂತಿಯಯೆಡೆಗೆ ಇರಿಸುತ್ತಿರುವ "ದೈತ್ಯ ಹೆಜ್ಜೆ" ಎಂದು ಅವರು ಬಣ್ಣಿಸಿದ್ದಾರೆ. ಆದರೆ, ಜೆರುಸಲೆಮ್ ಅನ್ನು ಪ್ಯಾಲೆಸ್ಟೈನ್ ದೇಶದ ರಾಜಧಾನಿಯಾಗಿ ನಾವು ಸ್ವೀಕರಿಸುವುದಿಲ್ಲ ಎಂದು ಹಮಾಸ್ ನಾಯಕ ಖಲೀಲ್ ಅಲ್-ಹಯಾ ಎಎಫ್‌ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ABOUT THE AUTHOR

...view details