ಕರ್ನಾಟಕ

karnataka

ETV Bharat / international

ನೊಬೆಲ್​ ಶಾಂತಿ ಪುರಸ್ಕಾರಕ್ಕಾಗಿ ಡೊನಾಲ್ಡ್​ ಟ್ರಂಪ್​ ಹೆಸರು ನಾಮ ನಿರ್ದೇಶನ - ಡೊನಾಲ್ಡ್​ ಟ್ರಂಪ್​​​​ ನೊಬೆಲ್​ ಪುರಸ್ಕಾರ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನೊಬೆಲ್ ಶಾಂತಿ ಪುರಸ್ಕಾರಕ್ಕಾಗಿ ನಾಮನಿರ್ದೇಶನ ಮಾಡಲಾಗಿದೆ ಎಂದು ತಿಳಿದು ಬಂದಿದೆ.

US President Donald Trump
US President Donald Trump

By

Published : Sep 9, 2020, 5:11 PM IST

ವಾಷಿಂಗ್ಟನ್​​: 2021ನೇ ಸಾಲಿನ ನೊಬೆಲ್​ ಶಾಂತಿ ಪುರಸ್ಕಾರಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​​ ಅವರ ಹೆಸರು ನಾಮ ನಿರ್ದೇಶನಗೊಂಡಿದೆ ಎಂದು ವರದಿಯಾಗಿದೆ.

ನಾರ್ವೆ ಸಂಸತ್‌ನ ಸದಸ್ಯ ಮತ್ತು ನ್ಯಾಟೋ ಸಂಸದೀಯ ಸಭೆಯ ಅಧ್ಯಕ್ಷ ಕ್ರಿಸ್ಟಿಯನ್ ಟೈಬ್ರಿಂಗ್-ಜೆಡ್ಡೆ ಈ ನಾಮ ನಿರ್ದೇಶನ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ಪ್ರಮುಖವಾಗಿ ಇಂಡೋ-ಪಾಕ್​​ ನಡುವಿನ ಕಾಶ್ಮೀರ ಗಡಿ ಸಮಸ್ಯೆ, ಉತ್ತರ ಮತ್ತು ದಕ್ಷಿಣ ಕೊರಿಯಾ ಸಂಘರ್ಷ, ಯುಎಇ-ಇಸ್ರೇಲ್​ ನಡುವಿನ ಒಪ್ಪಂದ ಸೇರಿದಂತೆ ವಿವಿಧ ದೇಶಗಳ ನಡುವಿನ ಜಾಗತಿಕ ಸಂಘರ್ಷ ತಡೆಗಟ್ಟುವಲ್ಲಿ ಟ್ರಂಪ್​ ಪ್ರಮುಖ ಪಾತ್ರವಹಿಸಿದ್ದಾರೆ. ಹೀಗಾಗಿ ಅವರ ಹೆಸರು ನಾಮನಿರ್ದೇಶನ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details