ವಾಷಿಂಗ್ಟನ್: ಕೊರೊನಾ ವೈರಸ್ ಹೊಡೆತಕ್ಕೆ ಬೆಚ್ಚಿಬಿದ್ದಿರುವ ವಿಶ್ವದ ದೊಡ್ಡಣ್ಣ, ಆರ್ಥಿಕ ವ್ಯವಸ್ಥೆಯ ಪುನರ್ ನಿರ್ಮಾಣಕ್ಕೆ ಮುಂದಾಗಿದೆ. ಇದಕ್ಕೆ ಭಾರತ-ಅಮೆರಿಕ ಕಾರ್ಪೋರೇಟ್ ದಿಗ್ಗಜರ ಸಹಕಾರವನ್ನು ಪಡೆಯಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದಾರೆ. ಇದರಲ್ಲಿ ಮೈಕ್ರೋಸಾಫ್ಟ್ ಕಂಪನಿಯ ಸಿಇಒ ಸತ್ಯ ನಾದೆಳ್ಲ, ಗೂಗಲ್ ಸಿಇಒ ಸುಂದರ್ ಪಿಚ್ಚೈ ಸೇರಿದಂತೆ ಆರು ಮಂದಿ ಭಾರತೀಯರು 'ಗ್ರೇಟ್ ಅಮೆರಿಕಾದ ರಿವೈವಲ್ ಇಂಡಸ್ಟ್ರಿ ಗ್ರೂಪ್'ನ ಭಾಗವಾಗಿ ಸೇವೆ ನೀಡಬೇಕೆಂದು ಕೋರಿದ್ದಾರೆ.
ಅಗ್ರಸ್ಥಾನ ಕಾಪಾಡಿಕೊಳ್ಳಲು ಹರಸಾಹಸ:ಅಮೆರಿಕ ಆರ್ಥಿಕ ವ್ಯವಸ್ಥೆಯ ಪುನರ್ ನಿರ್ಮಾಣಕ್ಕೆ ಟ್ರಂಪ್ 18 ತಂಡಗಳನ್ನು ರಚಿಸಿದ್ದಾರೆ. ಇದಕ್ಕಾಗಿ ವಿವಿಧ ಸಂಸ್ಥೆಗಳು, ವಿವಿಧ ವಿಭಾಗಗಳಿಂದ ಸುಮಾರು 200 ಮಂದಿ ಅಗ್ರ ಶ್ರೇಣಿಯ ಕಾರ್ಪೋರೇಟ್ ದಿಗ್ಗಜರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇವರು ಕೊಡುವ ಸಲಹೆಗಳು, ಸೂಚನೆಗಳ ಆಧಾರದ ಮೇಲೆ ಆರ್ಥಿಕ ವ್ಯವಸ್ಥೆಯನ್ನು ಮತ್ತೆ ನಿರ್ಮಿಸಬೇಕು ಎನ್ನುವುದು ದೊಡ್ಡಣ್ಣನ ಆಶಯವಾಗಿದೆ.
ಟೆಕ್ ಗ್ರೂಪ್ ದಿಗ್ಗಜರು
ಟ್ರಂಪ್ ಆಯ್ಕೆ ಮಾಡಿಕೊಂಡಿರುವ ಟೆಕ್ ದಿಗ್ಗಜರಲ್ಲಿ ಸತ್ಯ ನಾದೆಳ್ಲ, ಸುಂದರ್ ಪಿಚ್ಚೈ, ಐಬಿಎಂನ ಅರವಿಂದ್ ಕೃಷ್ಣ, ಮೈಕ್ರಾನ್‌ನ ಸಂಜಯ್ ಮೆಹ್ರೋತ್ರಾ ಇದ್ದಾರೆ. ಇದೇ ತಂಡದಲ್ಲಿ ಆ್ಯಪಲ್ ಕಂಪನಿಯ ಟೀಮ್ ಕುಕ್, ಒರಾಕಲ್ ಸಂಸ್ಥೆಯ ಲಾರಿ ಎಲಿಸನ್, ಫೇಸ್‌ಬುಕ್‌ನ ಮಾರ್ಕ್‌ಜುಕರ್ ಬರ್ಗ್ ಕೂಡ ಇದ್ದಾರೆ.
ಮ್ಯಾನುಫ್ಯಾಕ್ಚರಿಂಗ್ ಟೀಂ