ವಾಷಿಂಗ್ಟನ್ : ಆಗ್ನೇಯ ಏಷ್ಯಾ ರಾಷ್ಟ್ರಗಳ 10 ಸದಸ್ಯರ ಒಕ್ಕೂಟ (ಆಸಿಯಾನ್ )ನ ಹೊಸ ರಾಯಭಾರಿಯಾಗಿ ಮೇಜರ್ (ನಿವೃತ್ತ) ಜನರಲ್ ಎಲ್ಡನ್ ರೆಗುವಾ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇಮಕ ಮಾಡಿದ್ದಾರೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.
ಮೇಜರ್ ಜನರಲ್ ಎಲ್ಡನ್ ಪಿ ರೆಗುವಾ ಅವರು, 2013ರಲ್ಲಿ ನಿವೃತ್ತಿಯಾಗುವ ಮೊದಲು 36 ವರ್ಷಗಳ ಕಾಲ ಯುನೈಟೆಡ್ ಸ್ಟೇಟ್ಸ್ ಆರ್ಮಿ ಮತ್ತು ಯುನೈಟೆಡ್ ಸ್ಟೇಟ್ಸ್ ಆರ್ಮಿ ರಿಸರ್ವ್ನಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದರು.
ಕೊನೆಯಾದಾಗಿ ಅವರು ಡೆಪ್ಯೂಟಿ ಕಮಾಂಡಿಂಗ್ ಜನರಲ್/ಚೀಫ್ ಆಫ್ ಸ್ಟಾಫ್ (ಯುದ್ಧ ಸಮಯ) ಯುನೈಟೆಡ್ ಸ್ಟೇಟ್ಸ್ ಎಂಟನೇ ಸೈನ್ಯದ ಪ್ರಧಾನ ಕಚೇರಿ ಕೊರಿಯಾದ ಸಿಯೋಲ್‌ನಲ್ಲಿ ಕಾರ್ಯನಿರ್ವಹಿಸಿದ್ದರು. ರೆಗುವಾ ಪ್ರಸ್ತುತ ವರ್ಜೀನಿಯಾದ ಸ್ಪ್ರಿಂಗ್ಫೀಲ್ಡನ್ನಲ್ಲಿರುವ ನೆಕ್ಸ್ಟ್ ಸ್ಟೆಪ್ ಟೆಕ್ನಾಲಜಿ ಇನ್ಕಾರ್ಪೊರೇಷನ್ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಓಕ್ ಲೀಫ್ ಕ್ಲಸ್ಟರ್ನೊಂದಿಗೆ ಆರ್ಮಿ ಡಿಸ್ಟಿಂಗ್ವಿಶ್ ಸರ್ವೀಸ್ ಮೆಡಲ್ ಮತ್ತು ಓಕ್ ಲೀಫ್ ಕ್ಲಸ್ಟರ್ನೊಂದಿಗೆ ಲೀಜನ್ ಆಫ್ ಮೆರಿಟ್ ಸೇರಿದಂತೆ ಅವರ ಮಿಲಿಟರಿ ಸೇವೆಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.