ನ್ಯೂಯಾರ್ಕ್:ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸೋಮವಾರ ಅಮೆರಿಕ ಅಧ್ಯಕ್ಷ ಟ್ರಂಪ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬಳಿಕ ಸುದ್ದಿಗೋಷ್ಠಿಯಲ್ಲಿ ಉಭಯ ನಾಯಕರು ಪಾಲ್ಗೊಂಡಿದ್ದ ವೇಳೆ ಕುತೂಹಲಕಾರಿ ಘಟನೆ ನಡೆದಿದೆ. ಈ ಬೆಳವಣಿಗೆ ಪಾಕ್‌ಗೆ ಮುಖಭಂಗ ಉಂಟುಮಾಡಿದೆ.
ಪಾಕಿಸ್ತಾನಿ ಪತ್ರಕರ್ತನೋರ್ವ ಕಾಶ್ಮೀರ ವಿಚಾರವಾಗಿ ಪದೇ ಪದೇ ಪ್ರಶ್ನೆಗಳನ್ನು ಕೇಳುತ್ತಾ ಟ್ರಂಪ್ ಅಭಿಪ್ರಾಯವನ್ನು ದಾಖಲಿಸಲು ಮುಂದಾಗಿದ್ದಾನೆ.
ಕಾಶ್ಮೀರದಲ್ಲಿ ಕಳೆದ ಕೆಲ ದಿನಗಳಿಂದ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ. ಅಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗ್ತಿದೆ, ಇಂಟರ್‌ನೆಟ್ ಸೌಲಭ್ಯ ಇಲ್ಲ, ಜನರಿಗೆ ತಿನ್ನೋಕೆ ಊಟ ಸಿಗ್ತಿಲ್ಲ.. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಟ್ರಂಪ್ರನ್ನು ಪ್ರಶ್ನಿಸಿದ್ದಾನೆ. ಈ ವೇಳೆ ಇಮ್ರಾನ್ ಖಾನ್ ಬಳಿ ತಿರುಗಿದ ಟ್ರಂಪ್ 'ಇವರನ್ನೆಲ್ಲಾ ಎಲ್ಲಿಂದ ಕರೆದುಕೊಂಡು ಬರ್ತೀರಾ?' ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಟ್ರಂಪ್ ಅನಿರೀಕ್ಷಿತ ಪ್ರಶ್ನೆಗೆ ಇಮ್ರಾನ್ ಖಾನ್ ಕೊಂಚ ಅವಕ್ಕಾಗಿ ನಿರುತ್ತರರಾದರು. ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.