ಕರ್ನಾಟಕ

karnataka

ETV Bharat / international

ಕಿಮ್ ಸ್ಥಿತಿ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ, ಆದರೆ ಆ ಬಗ್ಗೆ ಮಾತನಾಡಲ್ಲ: ಟ್ರಂಪ್ - ಕಿಮ್ ಜಾಂಗ್ ಉನ್ ಹೇಗಿದ್ದಾರೆಂದು ನನಗೆ ಚೆನ್ನಾಗಿ ಗೊತ್ತಿದೆ

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹೇಗಿದ್ದಾರೆಂದು ನನಗೆ ಚೆನ್ನಾಗಿ ಗೊತ್ತಿದೆ, ಆದರೆ ನಾನು ಈಗ ಆದರ ಬಗ್ಗೆ ಮಾತನಾಡಲು ಹೋಗುವುದಿಲ್ಲ ಎಂದು ಶ್ವೇತ ಭವನದಲ್ಲಿ ಟ್ರಂಪ್ ಹೇಳಿರುವುದಾಗಿ ಸಿಯೋಲ್ ಮೂಲದ ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

Trump knows about Kim Jong-un, but can't talk about it
Trump knows about Kim Jong-un, but can't talk about it

By

Published : Apr 28, 2020, 3:17 PM IST

ಸಿಯೋಲ್ : ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ಊಹಾಪೋಹಗಳ ನಡುವೆಯೂ ಅವರು ಹೇಗೆ ಕಾರ್ಯಾ ನಿರ್ವಹಿಸುತ್ತಿದ್ದಾರೆ ಎಂದು ನನಗೆ ತಿಳಿದಿದೆ. ಆದರೆ, ಈ ಬಗ್ಗೆ ಮಾಹಿತಿ ನೀಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿದ್ದಾರೆ.

ನನಗೆ ಈ ಬಗ್ಗೆ ಚೆನ್ನಾಗಿ ಗೊತ್ತಿದೆ, ಆದರೆ ನಾನು ಈಗ ಅದರ ಬಗ್ಗೆ ಮಾತನಾಡಲು ಹೋಗುವುದಿಲ್ಲ, ಅವರಿಗೆ ನಾನು ಒಳ್ಳೆಯದನ್ನು ಬಯಸುತ್ತೇನೆ. ನಾನು ಕಿಮ್ ಜಾಂಗ್ ಉನ್ ಜೊತೆ ಉತ್ತಮ ಸಂಬಂಧ ಹೊಂದಿದ್ದೇನೆ ಎಂದು ಶ್ವೇತ ಭವನದಲ್ಲಿ ಟ್ರಂಪ್ ಹೇಳಿರುವುದಾಗಿ ಸಿಯೋಲ್ ಮೂಲದ ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಆದರೆ, ಕಿಮ್ ಎಲ್ಲಿದ್ದಾರೆ ಎಂಬುವುದರ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದು ಟ್ರಂಪ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ತಿಳಿಸಿದೆ.

ABOUT THE AUTHOR

...view details