ನ್ಯೂಯಾರ್ಕ್ :ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರದಿಂದ ನಿರ್ಗಮಿಸಲು ದಿನಗಣನೆ ಆರಂಭವಾಗಿದೆ. ಜನವರಿ 2020ರಂದು ಜೋ ಬೈಡನ್ಗೆ ಅಧಿಕಾರ ಹಸ್ತಾಂತರ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಗೈರು ಹಾಜರಾಗಲಿರುವ ಕೆಲವೇ ಕೆಲವು ನಿರ್ಗಮಿತ ಅಧ್ಯಕ್ಷರ ಪಟ್ಟಿಗೆ ಡೊನಾಲ್ಡ್ ಟ್ರಂಪ್ ಸೇರ್ಪಡೆಯಾಗಲಿದ್ದಾರೆ.
ಅಮೆರಿಕದ ಕ್ಯಾಪಿಟಲ್ನಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಭಿಯೋಗಕ್ಕೆ ಗುರಿಯಾಗಿ ತಮ್ಮ ಅಧಿಕಾರಾವಧಿಯಲ್ಲಿ ಎರಡು ಬಾರಿ ಮಹಾಭಿಯೋಗಕ್ಕೆ ಗುರಿಯಾದ ಏಕೈಕ ಅಮೆರಿಕ ಅಧ್ಯಕ್ಷರೆಂಬ ಕುಖ್ಯಾತಿಯನ್ನೂ ಟ್ರಂಪ್ ಕಟ್ಟಿಕೊಳ್ಳಲಿದ್ದಾರೆ. ಡೊನಾಲ್ಡ್ ಟ್ರಂಪ್ ಈ ಮೊದಲು 1801ರಲ್ಲಿ ಥಾಮಸ್ ಜಫರ್ಸನ್ ಅಮೆರಿಕದಲ್ಲಿ ಅಧಿಕಾರ ಸ್ವೀಕರಿಸಬೇಕಾದ್ರೆ, ಅಧ್ಯಕ್ಷ ಜಾನ್ ಅಡ್ಯಮ್ಸ್ ಸಮಾರಂಭಕ್ಕೆ ಹಾಜರಾಗಿರಲಿಲ್ಲ.
1829ರಲ್ಲಿ ಚುನಾವಣಾ ದ್ವೇಷ ಹಾಗೂ ವೈಯಕ್ತಿಕ ವಿಚಾರಗಳಿಂದ ಅಧ್ಯಕ್ಷ ಜಾನ್ ಕ್ವಿನ್ಸಿ ಅಡ್ಯಮ್ಸ್ ಅವರು ಆ್ಯಂಡ್ರೂ ಜಾಕ್ಸನ್ ಅವರ ಪದಗ್ರಹಣ ಸಮಾರಂಭಕ್ಕೆ ಗೈರಾಗಿದ್ದರು. ಉದ್ಘಾಟನಾ ಸಮಾರಂಭಕ್ಕೂ ಮೊದಲು ಆ್ಯಂಡ್ರೂ ಜಾಕ್ಸನ್ ಅವರ ಪತ್ನಿ ಮೃತಪಟ್ಟಿದ್ದು ಕೂಡ ಸಾಕಷ್ಟು ಚರ್ಚೆಗೆ ಕಾರಣವಾಯಿತು.