ವಾಷಿಂಗ್ಟನ್: ಚುನಾವಣೆ ಮುಗಿಯುವವರೆಗೆ ಕೋವಿಡ್-19 ಕುರಿತಂತೆ ಯಾವುದೇ ರೀತಿಯ ಪ್ರಚೋದನಕಾರಿ ಹೇಳಿಕೆ ನೀಡಬೇಡಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜನಪ್ರತಿನಿಧಿಗಳಿಗೆ ಸೂಚಿಸಿದ್ದಾರೆ.
ನಮ್ಮ ದೇಶದ ಭವಿಷ್ಯದ ದೃಷ್ಟಿಯಿಂದ ನನ್ನ ಪಕ್ಷದ ಜನಪ್ರತಿನಿಧಿಗಳೊಂದಿಗೆ ಮನವಿ ಮಾಡುತ್ತೇನೆ. ಮುಂಬರುವ ಚುನಾವಣೆಯಲ್ಲಿ ನಾನು ಗೆಲ್ಲುವವರೆಗೆ ಜನಪ್ರತಿನಿಧಿಗಳು ಡೆಮೊಕ್ರಾಟ್ಸ್ ಜೊತೆ ಪ್ರಚೋದನಕಾರಿ ಹೇಳಿಕೆ ನೀಡದಂತೆ ಸೂಚಿಸಿದ್ದೇನೆ. ನಾನು ಗೆದ್ದ ಕೂಡಲೇ ಕಠಿಣ ಪರಿಶ್ರಮಿ ಅಮೆರಿಕನ್ನರು ಮತ್ತು ಸಣ್ಣ ಉದ್ಯಮಗಳನ್ನು ಕೇಂದ್ರೀಕರಿಸುವ ಪ್ರಮುಖ ಮಸೂದೆಯನ್ನು ನಾವು ಅಂಗೀಕರಿಸಬೇಕಿದೆ. ಅಲ್ಲಿಯವರೆಗೆ ಸುಮ್ಮನಿರಿ ಎಂದು ಸೂಚಿಸಿರುವುದಾಗಿ ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಡೆಮೋಕ್ರಾಟಿಕ್ ರಾಜ್ಯಗಳಿಗೆ 2.4 ಟ್ರಿಲಿಯನ್ ಯುಎಸ್ಡಿ ಮೊತ್ತ ನೀಡುವಂತೆ ಕೇಳಿದ್ದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ಮನವಿ ತಿರಸ್ಕರಿಸಲಾಗಿದೆ. ಪೆಲೋಸಿ ಅವರು ಹೆಚ್ಚಿನ ಅಪರಾಧ ಹೊಂದಿರುವ ಡೆಮೋಕ್ರಾಟ್ ರಾಜ್ಯಗಳಿಗೆ ಈ ಮೊತ್ತ ಕೇಳಿದ್ದರು. ಅಲ್ಲದೆ ಈ ಮೊತ್ತವು ಕೋವಿಡ್-19ಗೆ ಸಂಬಂಧಿಸಿರಲಿಲ್ಲ. ನಾವು 61.6 ಟ್ರಿಲಿಯನ್ ಡಾಲರ್ ಮೊತ್ತದ ಉದಾರ ಕೊಡುಗೆ ನೀಡಿದ್ದೇವೆ. ಪೆಲೋಸಿ ಅವರು ವಿಶ್ವಾಸಾರ್ಹ ಮಾತುಕತೆ ನಡೆಸುತ್ತಿಲ್ಲ. ಹೀಗಾಗಿ ನಾನು ಅವರ ಮನವಿ ತಿರಸ್ಕರಿಸಿದ್ದೇನೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
ನಮ್ಮ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಷೇರು ಮಾರುಕಟ್ಟೆ ದಾಖಲೆಯ ಮಟ್ಟದಲ್ಲಿದೆ. ನಾವು ಆರ್ಥಿಕ ಚೇತರಿಕೆಯಲ್ಲಿ ಜಗತ್ತನ್ನು ಮುನ್ನಡೆಸುತ್ತಿದ್ದೇವೆ. ಉತ್ತಮವಾದುದು ಇನ್ಮುಂದೆ ಬರಲಿದೆ ಎಂದು ಹೇಳಿದ್ದಾರೆ.