ಕರ್ನಾಟಕ

karnataka

ಅಮೆರಿಕ ಅಧ್ಯಕ್ಷರ ವಿರುದ್ಧ ಮಹಾಭಿಯೋಗದ ಅಸ್ತ್ರ..! ಟ್ರಂಪ್​ ವಿರುದ್ಧದ ದೋಷಾರೋಪ ತನಿಖೆ ಆರಂಭ

By

Published : Nov 1, 2019, 8:21 AM IST

ಅಮೆರಿಕ ಅಧ್ಯಕ್ಷ ಟ್ರಂಪ್ ವಿರುದ್ಧ ದೇಶದ್ರೋಹ ಅಥವಾ ನಿಯಮ ಉಲ್ಲಂಘನೆ  ಆರೋಪ ಕೇಳಿ ಬಂದಿದ್ದು, ಈ ನಿಟ್ಟಿನಲ್ಲಿ ವಿಚಾರಣೆ ಅಗತ್ಯವಿದೆ ಎಂದಿರುವ ಹೌಸ್ ಡೆಮಾಕ್ರಟ್ಸ್​ ಮುಂದಿನ ಹಂತದ ವಿಚಾರಣೆಗೆ ಅನುಕೂಲವಾಗಲು ದೋಷಾರೋಪ ಅಂದರೆ  ಮಹಾಭಿಯೋಗಕ್ಕೆ (ಇಂಪೀಚ್​​ಮೆಂಟ್​​) ಆರಂಭಿಕ ಪ್ರಕ್ರಿಯೆಗಳಿಗೆ ಚಾಲನೆ ನೀಡಲು ಗುರುವಾರ ಮತದಾನ ಕ್ರಿಯೆ ನಡೆಯಿತು.

ಟ್ರಂಪ್​

ವಾಷಿಂಗ್ಟನ್​ : ಅಮೆರಿಕ ಅಧ್ಯಕ್ಷ ಟ್ರಂಪ್ ವಿರುದ್ಧ ದೇಶದ್ರೋಹ ಅಥವಾ ನಿಯಮ ಉಲ್ಲಂಘನೆ ಆರೋಪ ಕೇಳಿ ಬಂದಿದ್ದು, ಈ ನಿಟ್ಟಿನಲ್ಲಿ ವಿಚಾರಣೆ ಅಗತ್ಯವಿದೆ ಎಂದಿರುವ ಹೌಸ್ ಡೆಮಾಕ್ರಟ್ಸ್​ ಮುಂದಿನ ಹಂತದ ವಿಚಾರಣೆಗೆ ಅನುಕೂಲವಾಗಲು ದೋಷಾರೋಪ ಅಂದರೆ ಮಹಾಭಿಯೋಗಕ್ಕೆ (ಇಂಪೀಚ್​​ಮೆಂಟ್​​) ಆರಂಭಿಕ ಪ್ರಕ್ರಿಯೆಗಳಿಗೆ ಚಾಲನೆ ನೀಡಲು ಗುರುವಾರ ಮತದಾನ ಕ್ರಿಯೆ ನಡೆಯಿತು.

ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪ, ಮಹಾಭಿಯೋಗ (Impeachment) ಅಂದರೆ ಅಧ್ಯಕ್ಷ ಸ್ಥಾನದಿಂದ ವಜಾ ಮಾಡುವ ಪ್ರಕ್ರಿಯೆ ಆರಂಭಿಸಲು ಅಮೆರಿಕ ಕಾಂಗ್ರೆಸ್​ ಅನುಮತಿ ನೀಡಿದೆ. ಈ ಸಂಬಂಧ ನಿನ್ನೆ ಹೌಸ್​ ಆಫ್​ ರೆಫ್ರಜೆಂಟೇಟಿವ್​ನಲ್ಲಿ ಮತದಾನ ನಡೆಯಿತು. ದೋಷಾರೋಪ ಮಂಡನೆಗೆ ರಿಪಬ್ಲಿಕನ್ನರು ವಿರೋಧ ವ್ಯಕ್ತಪಡಿಸಿದರು.

ಟ್ರಂಪ್ ಅವರ ಆಡಳಿತದ ವಿರುದ್ಧ ಕೇಳಿ ಬಂದಿರುವ ಆರೋಪದ ಬಗ್ಗೆ ಮಹಾಭಿಯೋಗದ ಪ್ರಕ್ರಿಯೆ ಆರಂಭಿಸಲು ಅಮೆರಿಕದ ಕಾಂಗ್ರೆಸ್​​ ನಲ್ಲಿ ಮತ ಚಲಾವಣೆ ನಡೆಯಿತು. ಒಟ್ಟು 232 ಮತಗಳು ಪರವಾಗಿ ಮತ್ತು 196 ಮತಗಳು ವಿರುದ್ಧವಾಗಿ ದಾಖಲಾದವು.

ಇನ್ನು ಕಾಂಗ್ರೆಸ್​​ನ ಸರಳ ಬಹುಮತದ ಮೂಲಕ ದೋಷಾರೋಪದ ತನಿಖೆಗೆ ಅಂಗೀಕಾರ ಸಿಕ್ಕಿದೆ. ಈ ಮೂಲಕ ಡೊನಾಲ್ಡ್​ ಟ್ರಂಪ್​ ವಿರುದ್ಧ ತನಿಖೆ ಆರಂಭಗೊಂಡಿದೆ.

ಒಂದೊಂದು ದೇಶಕ್ಕೆ ಒಂದೊಂದು ಕಾನೂನು, ತನ್ನದೇ ನಿಯಮಗಳು ಇರುತ್ತವೆ. ಅದರಂತೆ ಅಮೆರಿಕ ಸಹ ತನ್ನದೇ ಆದ ಸಂವಿಧಾನ ಹೊಂದಿದೆ. ಅಲ್ಲಿನ ನಿಯಮದ ಪ್ರಕಾರ ಅಮೆರಿಕದ ಅಧ್ಯಕ್ಷರಾಗಿರುವವರು ಬೇರೆ ದೇಶದವರ ಸಹಾಯ ಪಡೆಯುವಂತಿಲ್ಲ. ಅಷ್ಟೇ ಅಲ್ಲ ದೇಶದ ಆಂತರಿಕ ವಿಚಾರಗಳ ಬಗ್ಗೆ ಮೂರನೇ ದೇಶದ ಮುಖ್ಯಸ್ಥರೊಂದಿಗೆ ಮಾತನಾಡುವಂತಿಲ್ಲ. ಆದರೆ, ಟ್ರಂಪ್​ ಮುಂಬರುವ 2020 ರ ಚುನಾವಣೆಗಾಗಿ ಉಕ್ರೇನ್​ ಅಧ್ಯಕ್ಷರ ನೆರವು ಬಯಸಿದ್ದಾರೆ ಎನ್ನಲಾಗಿದೆ. ಇದು ಈಗ ಅಧ್ಯಕ್ಷರ ವಿರುದ್ಧ ಮಹಾಭೀಯೋಗ ಅಂದರೆ ಅಧ್ಯಕ್ಷ ಪದವಿಯಿಂದ ತೆಗೆದು ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ABOUT THE AUTHOR

...view details