ವಾಷಿಂಗ್ಟನ್:ಅಮೆರಿಕ ಸೆನೆಟ್‌ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಭರ್ಜರಿ ಜಯವಾಗಿದ್ದು, ವಾಗ್ದಂಡನೆಯಿಂದ ಪಾರಾಗಿದ್ದಾರೆ. ಅಧಿಕಾರಿ ದುರಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಅಮೆರಿಕ ಸೆನೆಟ್‌ನಲ್ಲಿ ಡೆಮಾಕ್ರಟಿಕ್ ಪಕ್ಷ ವಾಗ್ದಂಡನೆ ನಿರ್ಣಯ ಮಂಡಿಸಿತ್ತು.
ಡೆಮಾಕ್ರಟಿಕ್ ಪಕ್ಷ, ರಿಪಬ್ಲಿಕನ್ ಪಕ್ಷ ಮತ್ತು ಅಧ್ಯಕ್ಷರ ಪರ ವೈಟ್ಹೌಸ್ ಕೌನ್ಸೆಲ್ಗಳ ತಂಡದ ವಾದ - ಪ್ರತಿವಾದ ಆಲಿಸಿದ ನಂತರ ಸೆನೆಟ್ ಈ ನಿರ್ಧಾರ ಕೈಗೊಂಡಿದೆ. ದೋಷಾರೋಪದಿಂದ ಅವರು ಪಾರಾಗಿರುವುದರಿಂದ ಅಮೆರಿಕ ಸೆನೆಟ್‌ನಲ್ಲಿ ಡೆಮಾಕ್ರಟಿಕ್ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ. ಇದಕ್ಕಾಗಿ ನಡೆದ ಮತದಾನದಲ್ಲಿ ಟ್ರಂಪ್ ಪರವಾಗಿ 52 ಮತಗಳು ಬಿದ್ದರೆ, ವಿರುದ್ಧವಾಗಿ 48 ಮತಗಳು ಲಭಿಸಿದ್ದವು. ಹೀಗಾಗಿ ಟ್ರಂಪ್ ವಾಗ್ದಂಡನೆಯಿಂದ ಮುಕ್ತಿ ಪಡೆದರು. ವಾಗ್ದಂಡನೆಯಿಂದ ಪಾರಾದ ಮೂರನೇ ಅಧ್ಯಕ್ಷ ಇವರಾಗಿದ್ದಾರೆ.
ಡೆಮಾಕ್ರೆಟಿಕ್ ಪಕ್ಷ ಮಾಡಿರುವ ವಾಗ್ದಂಡನೆ ದುರ್ಬಲವಾಗಿದ್ದು, ಇದು ಸಂವಿಧಾನದ ಅಪಾಯಕ ಕೃತ್ಯ ಎಂದು ಟ್ರಂಪ್ ಪರ ಕಾನೂನು ತಂಡ ವಾದಿಸಿತ್ತು. ಅಧ್ಯಕ್ಷರು ಯಾವುದೇ ತಪ್ಪು ಮಾಡಿಲ್ಲ. ಹಾಗಾಗಿ ವಾಗ್ದಂಡನೆಯನ್ನು ತಿರಸ್ಕರಿಸಬೇಕೆಂದು ಮನವಿ ಮಾಡಿದ್ದರು.
ಈ ಮೊದಲು ಅಮೆರಿಕ ಅಧ್ಯಕ್ಷರಾಗಿದ್ದ ನಿಕ್ಸನ್ ಮತ್ತು ಬಿಲ್ ಕ್ಲಿಂಟನ್ ವಾಗ್ದಂಡನೆಯಿಂದ ಪಾರಾಗಿದ್ದರು. ಬಿಲ್ ಕ್ಲಿಂಟನ್ ಮೊನಿಕಾ ಲೆವನಸ್ಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಮೇಲೆ ವಾಗ್ದಂಡನೆ ಎದುರಿಸಿದ್ದರು. ಆಗಲು ಕ್ಲಿಂಟನ್ ವಾಗ್ದಂಡನೆಯಿಂದ ಪಾರಾಗಿ, ಅಧಿಕಾರದಲ್ಲಿ ಮುಂದುವರೆದಿದ್ದರು. 1974ರಲ್ಲಿಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರ ವಿರುದ್ಧವೂ ವಾಗ್ದಂಡನೆ ನಡೆದಿತ್ತು. ಅಧಿಕಾರದ ದುರುಪಯೋಗ ಸೇರಿದಂತೆ ನಾನಾ ಕಾರಣಗಳಿಂದ ವಾಗ್ದಂಡನೆ ಪ್ರಕ್ರಿಯೆ ಕೈಗೊಳ್ಳಲಾಗಿತ್ತು. ಇನ್ನೇನು ತನಿಖೆ ಮುಗಿಯುವ ಹಂತದಲ್ಲಿಅವರು ರಾಜೀನಾಮೆ ನೀಡಿದ್ದರಿಂದ ವಾಗ್ದಂಡನೆ ಕೈ ಬಿಡಲಾಗಿತ್ತು.