ಕರ್ನಾಟಕ

karnataka

ETV Bharat / international

ಅಧಿಕಾರ ದುರುಪಯೋಗ ಆರೋಪ: ವಾಗ್ದಂಡನೆಗೆ ಗುರಿಯಾದ ಅಮೆರಿಕ ಅಧ್ಯಕ್ಷ ಟ್ರಂಪ್​​​!​ - ಅಧಿಕಾರ ದುರುಪಯೋಗ ಆರೋಪ

ಅಧಿಕಾರ ದುರುಪಯೋಗ ಮಾಡಿಕೊಂಡ ಆರೋಪದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ವಾಗ್ದಂಡನೆಗೆ ಒಳಗಾಗಿದ್ದಾರೆ.

ವಾಗ್ದಂಡನೆಗೆ ಗುರಿಯಾದ ಅಮೆರಿಕ ಅಧ್ಯಕ್ಷ ಟ್ರಂಪ್,trump impeachment
ವಾಗ್ದಂಡನೆಗೆ ಗುರಿಯಾದ ಅಮೆರಿಕ ಅಧ್ಯಕ್ಷ ಟ್ರಂಪ್

By

Published : Dec 19, 2019, 7:52 AM IST

Updated : Dec 19, 2019, 8:17 AM IST

ವಾಷಿಂಗ್ಟನ್​: ಅಧಿಕಾರ ದುರುಪಯೋಗ ಮಾಡಿಕೊಂಡ ಆರೋಪದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುಎಸ್ ಹೌಸ್ ಆಫ್ ರೆಪ್ರೆಸೆಂಟೆಟಿವ್ಸ್​ನಲ್ಲಿ ವಾಗ್ದಂಡನೆಗೆ ಒಳಗಾಗಿದ್ದಾರೆ.

ಅಮೆರಿಕ ಅಧ್ಯಕ್ಷ ಟ್ರಂಪ್ ವಿರುದ್ಧ ದೋಷಾರೋಪದ ಎರಡು ಆರ್ಟಿಕಲ್​​ಗಳನ್ನು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅಂಗೀಕರಿಸಿದೆ. ಈ ಮೂಲಕ ವಾಗ್ದಂಡನೆಗೆ ಗುರಿಯಾದ ಅಮೆರಿಕದ ಮೂರನೇ ಅಧ್ಯಕ್ಷ ಟ್ರಂಪ್​ ಆಗಿದ್ದಾರೆ.

ಟ್ರಂಪ್​ ವಾಗ್ದಂಡನೆ ಸಂಬಂಧ ಯುಎಸ್ ಹೌಸ್ ಆಫ್ ರೆಪ್ರೆಸೆಂಟೆಟಿವ್ಸ್​ನಲ್ಲಿ 2 ಆರ್ಟಿಕಲ್​ಗಳನ್ನು ಮತಕ್ಕೆ ಹಾಕಲಾಯ್ತು. ಇದರಲ್ಲಿ ಟ್ರಂಪ್​ ವಾಗ್ದಂಡನೆ ಪರವಾಗಿ ಹೆಚ್ಚು ಮತಗಳು ಬಂದವು. ಇಲ್ಲಿನ ಪ್ರತಿಪಕ್ಷವಾದ ಡೆಮಾಕ್ರಟಿಕ್​ ಪಕ್ಷದ 217 ಮತಗಳು ಹಾಗೂ ಒಂದು ಇತರ ಮತ ಸೇರಿ ಒಟ್ಟು 218 ಮತಗಳು ಟ್ರಂಪ್​ ವಾಗ್ದಂಡನೆ ಪರವಾಗಿ ಬಂದಿವೆ. ಉಳಿದಂತೆ ಟ್ರಂಪ್​ ಪ್ರತಿನಿಧಿಸುವ ರಿಪಬ್ಲಿಕನ್​ ಪಕ್ಷದ 160 ಮತಗಳು ಟ್ರಂಪ್​ ವಾಗ್ದಂಡನೆ ವಿರುದ್ಧವಾಗಿ ಬಂತು. ಪ್ರತಿಪಕ್ಷ ಡೆಮಾಕ್ರಟಿಕ್​ ಪಕ್ಷದ ಮೂವರು ಸದಸ್ಯರು ಟ್ರಂಪ್​ ವಾಗ್ದಂಡನೆ ವಿರೋಧಿಸಿದ್ದು, ಒಟ್ಟು 163 ಮತಗಳು ಟ್ರಂಪ್​ ವಾಗ್ದಂಡನೆ ವಿರೋದ್ಧವಾಗಿ ಬಂದಿವೆ. ಆದರೆ ವಾಗ್ದಂಡನೆ ಪರವಾಗಿ ಅಧಿಕ ಮತಗಳು ಬಂದ ಹಿನ್ನೆಲೆಯಲ್ಲಿ ಅಮೆರಿಕಾ ಅಧ್ಯಕ್ಷ ವಾಗ್ದಂಡನೆಗೆ ಗುರಿಯಾಗಿದ್ದಾರೆ.

ಇನ್ನೊಂದೆಡೆ, ಸೆನೆಟ್​ನಲ್ಲಿ ತಾನು ಸುಲಭವಾಗಿ ಪಾರಾಗುತ್ತೇನೆ ಹಾಗೂ ಸೆನೆಟ್​ನಲ್ಲಿ ತಮ್ಮ ವಾಗ್ದಂಡನೆಗೆ ವಿರೋಧ ವ್ಯಕ್ತವಾಗುತ್ತದೆ ಎಂದು ಟ್ರಂಪ್ ವಿಶ್ವಾಸದಲ್ಲಿದ್ದಾರೆ ಎಂಬ ಮಾಹಿತಿ ಶ್ವೇತಭವನದ ಮೂಲಗಳಿಂದ ಲಭಿಸಿದೆ. ಅಲ್ಲದೆ ಟ್ರಂಪ್​ ಸಂಪೂರ್ಣವಾಗಿ ದೋಷಮುಕ್ತರಾಗುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರೆ.

ಟ್ರಂಪ್ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಡೆಮಾಕ್ರಟಿಕ್ ಪಕ್ಷ ಆರೋಪಿಸಿತ್ತು. ಕಳೆದ ಜುಲೈ 25 ರಂದು ಉಕ್ರೇನ್​ ಆಧ್ಯಕ್ಷ ವೊಲೊಡಿಮೈರ್ ಝೆಲೆನ್ಸ್ಕಿಗೆ ಕರೆ ಮಾಡಿದ್ದ ಟ್ರಂಪ್​, ಅಮೆರಿಕ ಡೆಮಾಕ್ರಟಿಕ್ ಪಕ್ಷದ ನಾಯಕ ಜೋ ಬಿಡೆನ್ ಮತ್ತು ಅವರ ಮಗ ಹಂಟರ್ ಬಿಡೆನ್, ಉಕ್ರೇನ್​ನಲ್ಲಿ ಪಾಲುದಾರರಾಗಿರುವ ಉದ್ಯಮದಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಗಮನಹರಿಸಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದಕ್ಕಾಗಿಯೇ ಡೆಮಾಕ್ರಟಿಕ್​ ಪಕ್ಷ, ರಿಪಬ್ಲಿಕ್​ ಪಕ್ಷದ ಟ್ರಂಪ್​ ವಾಗ್ದಂಡನೆಗೆ ಒತ್ತಾಯಿಸಿತ್ತು.

ಈ ಮೂಲಕ ವಾಗ್ದಂಡನೆ ಎದುರಿಸಿದ ಅಮೆರಿಕದ 4ನೇ ಅಧ್ಯಕ್ಷ ಎಂಬ ಕುಖ್ಯಾತಿಗೆ ಟ್ರಂಪ್​ ಪಾತ್ರರಾಗಿದ್ದರೆ. ಇದಕ್ಕೂ ಮೊದಲು ಆಂಡ್ರೂ ಜಾನ್ಸನ್​, ರಿಚರ್ಡ್​ ನಿಕ್ಸನ್​ ಮತ್ತು ಬಿಲ್​ ಕ್ಲಿಂಟನ್​ ವಾಗ್ದಂಡನೆ ವಿಚಾರಣೆ ಎದುರಿಸಿದ್ದರು.

ಒಂದು ವೇಳೆ ಸೆನೆಟ್​​​​ನಲ್ಲಿ ವಾಗ್ದಂಡನೆ ಪರ ಹೆಚ್ಚಿನ ಮತಗಳು ಬಂದರೆ ಟ್ರಂಪ್​ ಅಧಿಕಾರ ಕಳೆದುಕೊಳ್ಳಲಿದ್ದಾರೆ. ಆದರೆ ಸೆನೆಟ್​ನಲ್ಲಿ ಟ್ರಂಪ್​ರ ರಿಪಬ್ಲಿಕನ್​ ಪಕ್ಷದ ಸದಸ್ಯರೇ ಜಾಸ್ತಿ ಇರುವುದರಿಂದ ಟ್ರಂಪ್ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಕಡಿಮೆ.

Last Updated : Dec 19, 2019, 8:17 AM IST

ABOUT THE AUTHOR

...view details