ವಾಷಿಂಗ್ಟನ್: ವೇಗವಾಗಿ ಹರಡುವ ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಅದಕ್ಕಾಗಿ 50 ಬಿಲಿಯನ್ ಡಾಲರ್ ಹಣವನ್ನು ಬಿಡುಗಡೆ ಮಾಡಿದ್ದಾರೆ. ಹಾಗೆಯೇ ಶುಕ್ರವಾರ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದ್ದಾರೆ.
ಸಂಯುಕ್ತ ಸರ್ಕಾರದ ಸಂಪೂರ್ಣ ಅಧಿಕಾರವನ್ನು ಸಡಿಲಿಸಲು, ನಾನು ಅಧಿಕೃತವಾಗಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸುತ್ತಿದ್ದೇನೆ ಎಂದು ಟ್ರಂಪ್ ವೈಟ್ ಹೌಸ್ನಲ್ಲಿ ಹೇಳಿಕೆ ನೀಡಿದ್ದಾರೆ. ತುರ್ತು ಕಾರ್ಯಾಚರಣೆ ಕೇಂದ್ರಗಳನ್ನು ಸ್ಥಾಪಿಸಲು ಟ್ರಂಪ್ ಎಲ್ಲ ರಾಜ್ಯಗಳಿಗೆ ಕರೆ ನೀಡಿದ್ದು, ದೇಶಾದ್ಯಂತ ಸಾಕಷ್ಟು ಪರೀಕ್ಷಾ ಕಿಟ್‌ಗಳ ಕೊರತೆಯ ಬಗ್ಗೆ ಟೀಕೆಗಳ ನಡುವೆ ಸರ್ಕಾರವು ಪರೀಕ್ಷೆಯನ್ನು ವೇಗಗೊಳಿಸುತ್ತಿದೆ ಎಂದು ಹೇಳಿದರು.