ವಾಷಿಂಗ್ಟನ್ :ಟ್ರಂಪ್ ಅವರ ಇತ್ತೀಚಿನ ನಡವಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಜನವರಿ 20ರಂದು ಕಚೇರಿಯಿಂದ ಹೊರಡುವ ಮುನ್ನ ಅವರು ಸ್ವಯಂ ಕ್ಷಮೆ ಕೇಳುವುದಾಗಿ ಆಪ್ತರೊಂದಿಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಂತರ ಅವರ ನಡವಳಿಕೆಯನ್ನು ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಶಾಸಕರು ಸಮಾನವಾಗಿ ಖಂಡಿಸಿದ್ದರು. ಈ ಮಧ್ಯೆ ಜೋ ಬೈಡನ್ ಹಾಗೂ ಕಮಲಾ ಹ್ಯಾರಿಸ್ ಅವರ ಗೆಲುವನ್ನು ದೃಢೀಕರಿಸುವ ವೇಳೆ ಟ್ರಂಪ್ ಅವರ ಪರಾಜಯವನ್ನು ಒಪ್ಪಿಕೊಳ್ಳದೆ, ಅವರ ಬೆಂಬಲಿಗರು ವಾಷಿಂಗ್ಟನ್ ಡಿಸಿಯ ಕ್ಯಾಪಿಟಲ್ ಕಟ್ಟಡದ ಮೇಲೆ ದಾಳಿ ನಡೆಸಿದ್ರು. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, ಹಲವರ ಸ್ಥಿತಿ ಗಂಭೀರವಾಗಿತ್ತು.
ಅಧ್ಯಕ್ಷರು ಸ್ವಯಂ ಕ್ಷಮೆಯನ್ನು ನೀಡುವ ಅಧಿಕಾರ ಹೊಂದಿದ್ದಾರೆಯೇ ಎಂಬ ಬಗ್ಗೆ ಟ್ರಂಪ್ ಕಾನೂನು ತಜ್ಞರ ಅಭಿಪ್ರಾಯ ಕೇಳಿದ್ದಾರೆ. ಟ್ರಂಪ್ ಅವರನ್ನು ಅಧಿಕಾರದಿಂದ ತೆಗೆದು ಹಾಕಬೇಕೆಂದು ಉಪ ರಾಷ್ಟ್ರಪತಿ ಮೈಕ್ ಪೆನ್ಸ್ ಮತ್ತು ಕ್ಯಾಬಿನೆಟ್ ಯುಎಸ್ ಸಂವಿಧಾನದ 25ನೇ ತಿದ್ದುಪಡಿಯನ್ನು ಒತ್ತಾಯಿಸಬೇಕು ಎಂದು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮತ್ತು ಸೆನೆಟ್ ಡೆಮಾಕ್ರಟಿಕ್ ನಾಯಕ ಚಕ್ ಶುಮರ್ ಹೇಳಿದ್ದಾರೆ.
ಇದನ್ನೂ ಓದಿ :ಪ್ರತಿಭಟನೆ ವೇಳೆ ಯುಎಸ್ ಕ್ಯಾಪಿಟಲ್ ಒಳಗೆ ಗುಂಡಿನ ಮೊರೆತ: ನಾಲ್ವರ ಸಾವು
ಈ ಹಿಂದೆ ಕ್ಷಮಾದಾನ ಪಡೆದ ಏಕೈಕ ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್. ನಿಕ್ಸನ್ ಅಧಿಕಾರದಿಂದ ನಿವೃತ್ತಿ ಹೊಂದಿದ ಒಂದು ತಿಂಗಳ ನಂತರ, ಅವರ ಮಾಜಿ ಉಪಾಧ್ಯಕ್ಷ ಜೆರಾಲ್ಡ್ ಫೋರ್ಡ್, ಅವರ ಅಪರಾಧಗಳಿಗೆ ಕ್ಷಮಾದಾನ ನೀಡಿದ್ದರು.