ವಾಷಿಂಗ್ಟನ್: ಒಸಾಮಾ ಬಿನ್ ಲಾಡೆನ್ ಪುತ್ರ, ಈತನ ನಂತರದ ಅಲ್-ಖೈದಾ ಉಗ್ರ ಸಂಘಟನೆಯ ಉತ್ತರಾಧಿಕಾರಿ ಹಂಝ ಬಿನ್ ಲ್ಯಾಡೆನ್ ಹತ್ಯೆಯನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಚಿತಪಡಿಸಿದ್ದಾರೆ.
ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಣ ಗಡಿ ಪ್ರದೇಶದಲ್ಲಿ ಅಮೆರಿಕಾ ಭಯೋತ್ಪಾದನಾ ನಿಗ್ರಹದಳ ನಡೆಸಿದ ಕಾರ್ಯಾಚರಣೆಯಲ್ಲಿ ಹಂಝ ಬಿನ್ ಲ್ಯಾಡೆನ್ ಕೊಲ್ಲಲ್ಪಟ್ಟಿದ್ದಾನೆ ಎಂದು ಟ್ರಂಪ್ ಶ್ವೇತಭವನದಿಂದ ಬಿಡುಗಡೆ ಮಾಡಲಾದ ಸಂಕ್ಷಿಪ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.