ವಾಷಿಂಗ್ಟನ್ :ಚುನಾಯಿತ ಅಧ್ಯಕ್ಷ ಜೋ ಬೈಡನ್ ಪರ ಮಾತನಾಡಿರುವಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕ್ಯಾಪಿಟಲ್ ಮೇಲಿನ ಹಿಂಸಾತ್ಮಕ ದಾಳಿಯನ್ನು ಖಂಡಿಸಿದ್ದಾರೆ.
ಹೊಸ ವೀಡಿಯೊ ಸಂದೇಶವೊಂದರಲ್ಲಿ ಮಾತನಾಡಿದ ಟ್ರಂಪ್, ಸದ್ಯ ಕಾಂಗ್ರೆಸ್ ಚುನಾವಣಾ ಫಲಿತಾಂಶವನ್ನು ಅಧಿಕೃತವಾಗಿ ಒಪ್ಪಿಕೊಂಡಿದೆ. ಜನವರಿ 20 ರಿಂದ ಹೊಸ ಆಡಳಿತ ಪ್ರಾರಂಭವಾಗಲಿದೆ. ನಮ್ಮ ಗಮನವು ಸುಗಮ, ಕ್ರಮಬದ್ಧ ಅಧಿಕಾರ ವರ್ಗಾವಣೆಯತ್ತ ಇರಲಿದೆ ಎಂದಿದ್ದಾರೆ.