ವಾಷಿಂಗ್ಟನ್(ಅಮೆರಿಕ):2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಗೆಲುವು ಸಾಧಿಸುತ್ತಿದ್ದಂತೆ, ಟ್ವಿಟರ್ನಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಕಿಚಾಯಿಸುತ್ತಿರುವ ಬೈಡನ್ ಅಭಿಮಾನಿಗಳು 'ಲೂಸರ್' ಎನ್ನುತ್ತಿದ್ದಾರೆ.
ಟ್ವಿಟರ್ನಲ್ಲಿ 'ಲೂಸರ್' ಎಂದು ಸರ್ಚ್ ಮಾಡಿದ್ರೆ ಟ್ರಂಪ್ ಖಾತೆ ಪ್ರತ್ಯಕ್ಷ!!
ಸಾಮಾನ್ಯವಾಗಿ ನಾವು ಹುಡುಕುವ ಪದಕ್ಕೆ ಸಂಬಂಧಪಟ್ಟ ಖಾತೆ ಮೊದಲು ಬರೆಬೇಕು. ಆದರೆ, ಲೂಸರ್ ಎಂದು ಸರ್ಚ್ ಮಾಡಿದ್ರೆ ಟ್ರಂಪ್ ಖಾತೆಯನ್ನು ತೋರಿಸುತ್ತಿದೆ. ಈ ಬಗ್ಗೆ ಟ್ವಿಟರ್ ಸ್ಪಷ್ಟನೆ ನೀಡಿದೆ..
ಈ ನಡುವೆ ಟ್ವಿಟರ್ ಬಳಕೆದಾರರು 'ಲೂಸರ್'(loser) ಎಂಬ ಪದವನ್ನು ಹುಡುಕುತ್ತಿದ್ದು, ಮೊದಲ ಫಲಿತಾಂಶವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧಿಕೃತ ಖಾತೆ ತೋರಿಸುತ್ತಿದೆ.
ಸಾಮಾನ್ಯವಾಗಿ ನಾವು ಹುಡುಕುವ ಪದಕ್ಕೆ ಸಂಬಂಧಪಟ್ಟ ಖಾತೆ ಮೊದಲು ಬರೆಬೇಕು. ಆದರೆ, ಲೂಸರ್ ಎಂದು ಸರ್ಚ್ ಮಾಡಿದ್ರೆ ಟ್ರಂಪ್ ಖಾತೆಯನ್ನು ತೋರಿಸುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಟ್ವಿಟರ್, "ಆ ಸಮಯದಲ್ಲಿ ಅಪ್ಲಿಕೇಶನ್‌ನಲ್ಲಿರುವ ಜನರು ತಮ್ಮ ಟ್ವೀಟ್‌ಗಳಲ್ಲಿನ ಪದಗಳನ್ನು ಹೇಗೆ ಬಳಸುತ್ತಿದ್ದಾರೆ ಎಂಬುದರ ಆಧಾರದ ಮೇಲೆ ಫಲಿತಾಂಶಗಳನ್ನು ಸ್ವಯಂಚಾಲಿತವಾಗಿ ರಚಿಸಲಾಗುತ್ತದೆ" ಎಂದು ಹೇಳಿದೆ. "ಜನರು ಹೇಗೆ ಟ್ವೀಟ್ ಮಾಡುತ್ತಾರೆ ಎಂಬುದರ ಆಧಾರದ ಮೇಲೆ ಫಲಿತಾಂಶಗಳು ಸದಾ ಬದಲಾಗುತ್ತವೆ" ಎಂದು ಹೇಳಿಕೆಯಲ್ಲಿ ತಿಳಿಸಿದೆ.