ಕರ್ನಾಟಕ

karnataka

ETV Bharat / international

ರಿಪಬ್ಲಿಕನ್ ಪಕ್ಷದಿಂದ ಟ್ರಂಪ್ ಪರ ವೈದ್ಯರ ನೇಮಕ : ಗೌಪ್ಯ ಮಾಹಿತಿ ಬಹಿರಂಗ - rapid reopening

ಕೌನ್ಸಿಲ್ ಫಾರ್ ನ್ಯಾಷನಲ್ ಪಾಲಿಸಿ( ಸಿಎನ್‌ಪಿ) ಆ್ಯಕ್ಷನ್ ಸಮಿತಿ ಟ್ರಂಪ್ ಮರು ಚುನಾವಣೆ ಸಮಿತಿಯ ಹಿರಿಯ ಸದಸ್ಯನೊಂದಿಗೆ ನಡೆಸಿದ್ದ ಕಾನ್ಪರೆನ್ಸ್​ ಕರೆಯ ರೆಕಾರ್ಡ್ ಒಂದು ​ಅಸೋಸಿಯೇಟೆಡ್​ ಪ್ರೆಸ್​ಗೆ ದೊರೆತಿದೆ. ಇದರಿಂದ ಟ್ರಂಪ್ ಆಡಳಿತದ ಗೌಪ್ಯ ಮಾಹಿತಿಯೊಂದು ಹೊರಬಿದ್ದಿದೆ.

Trump allies lining up doctors to prescribe rapid reopening
ರಿಪಬ್ಲಿಕನ್ ಪಕ್ಷದಿಂದ ಟ್ರಂಪ್ ಪರ ವೈದ್ಯರ ನೇಮ

By

Published : May 20, 2020, 4:43 PM IST

ವಾಷಿಂಗ್ಟನ್ :ಕೊರೊನಾ ಹರಡುವಿಕೆಯನ್ನು ನಿಯಂತ್ರಿಸಲು ಫೆಡರಲ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಸನ್ ಸೊಸೈಟಿ ಸೂಚಿಸಿರುವ ಸುರಕ್ಷತಾ ಮಾನದಂಡಗಳನ್ನು ಗಣನೆಗೆ ತೆಗೆದುಕೊಳ್ಳದೇ ರಿಪಬ್ಲಿಕನ್ ಪಕ್ಷದ ಕಾರ್ಯಕಾರಿಣಿ ಸಮಿತಿಯು ಟ್ರಂಪ್ ಪರ ಇರುವ ವೈದ್ಯರನ್ನು ನೇಮಕ ಮಾಡುತ್ತಿದೆ ಎಂಬ ವಿಷಯ ಹೊರ ಬಿದ್ದಿದೆ.

ಗ್ರ್ಯಾಂಡ್​ ಓಲ್ಡ್​ ಪಾರ್ಟಿ (ಜಿಒಪಿ) ಅಂಗ ಸಂಸ್ಥೆಯಾದ ಕೌನ್ಸಿಲ್ ಫಾರ್ ನ್ಯಾಷನಲ್ ಪಾಲಿಸಿ( ಸಿಎನ್‌ಪಿ) ಆ್ಯಕ್ಷನ್ ಸಮಿತಿ ಟ್ರಂಪ್ ಮರು ಚುನಾವಣೆ ಸಮಿತಿಯ ಹಿರಿಯ ಸದಸ್ಯನೊಂದಿಗೆ ನಡೆಸಿದ್ದ ಕಾನ್ಪರೆನ್ಸ್​ ಕರೆಯ ರೆಕಾರ್ಡ್ ಒಂದು ​ ಅಸೋಸಿಯೇಟೆಡ್​ ಪ್ರೆಸ್​ಗೆ ದೊರೆತಿದೆ. ಈ ಮೂಲಕ ಮಾಹಿತಿ ಹೊರ ಬಿದ್ದಿದೆ.

ಸಿಎನ್‌ಪಿ ಆ್ಯಕ್ಷನ್ ಸಮಿತಿಯು ದೇಶದಲ್ಲಿ ವಿಧಿಸಲಾದ ಲಾಕ್​​​​​​​ಡೌನ್​ ಕೊನೆಗೊಳಿಸುವ ಬಗ್ಗೆ ಚರ್ಚಿಸಲು ರಚಿಸಲಾದ ರಾಜಕೀಯ ಸಮಿತಿಗಳ ಒಕ್ಕೂಟವಾದ ಸೇವ್ ಅವರ್​ ಕಂಟ್ರಿಯ ಒಂದು ಭಾಗವಾಗಿದೆ. ಈ ಒಕ್ಕೂಟದಲ್ಲಿ ಫ್ರೀಡಂ ವರ್ಕ್ಸ್ ಫೌಂಡೇಶನ್, ಅಮೆರಿಕನ್ ಲೆಜಿಸ್ಲೇಟಿವ್ ಎಕ್ಸ್ಚೇಂಜ್ ಕೌನ್ಸಿಲ್ ಸೇರಿದಂತೆ ಇತರ ಸಂಘಟನೆಗಳು ಸೇರಿವೆ.

ABOUT THE AUTHOR

...view details