ಕರ್ನಾಟಕ

karnataka

ETV Bharat / international

ಮಂಡಿಯೂರಿ ನಿಂತು ವರ್ಣಭೇದ ನೀತಿ ವಿರುದ್ಧ ಪ್ರತಿಭಟಿಸಿದ ಕೆನಡಾ ಪ್ರಧಾನಿ

ಅಮೆರಿಕದಲ್ಲಿ ಕಪ್ಪು ವರ್ಣೀಯ ಜಾರ್ಜ್​ ಫ್ಲಾಯ್ಡ್​ ಹತ್ಯೆ ವಿರೋಧಿಸಿ ಕೆನಡಾದಲ್ಲೂ ಪ್ರತಿಭಟನೆಗಳು ನಡೆಯುತ್ತಿವೆ. ಇಲ್ಲಿನ ಟೊರೊಂಟೊ ನಗರದಲ್ಲಿ ನಡೆದ ಪ್ರತಿಭಟನಾ ರ‍್ಯಾಲಿಯಲ್ಲಿ ಪ್ರಧಾನಿ ಜಸ್ಟಿನ್ ಟ್ರುಡೊ, ಮಂಡಿಯೂರಿ ನಿಂತು ವರ್ಣಭೇದ ನೀತಿ ವಿರೋಧಿ ಪ್ರತಿಭಟನೆಯನ್ನು ಬೆಂಬಲಿಸಿದರು.

Trudeau
ಕೆನಡಾ ಪ್ರಧಾನಿ

By

Published : Jun 6, 2020, 12:52 PM IST

ಟೊರೊಂಟೊ(ಕೆನಡಾ): ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಕಳೆದ ಶುಕ್ರವಾರ ಜನಾಂಗೀಯ ವಿರೋಧಿ ಪ್ರತಿಭಟನಾ ರ‍್ಯಾಲಿಯಲ್ಲಿ ಪಾಲ್ಗೊಂಡು, ಪ್ರತಿಭಟನಾಕಾರರೊಂದಿಗೆ ಸೇರಿ ಮಂಡಿಯೂರಿ ನಿಂತು ಪ್ರತಿಭಟನೆ ನಡೆಸಿದರು.

ಕಪ್ಪು ಮಾಸ್ಕ್​ ಧರಿಸಿ ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ಒಟ್ಟಾವಾದ ಪಾರ್ಲಿಮೆಂಟ್ ಹಿಲ್​ಗೆ ಬಂದ ಅವರೊಂದಿಗೆ, ಕೆಲ ಪ್ರತಿಭಟನಾಕಾರರು ಮಂಡಿಯೂರಲು ವಿನಂತಿಸಿದರು. ಅದರಂತೆಯೇ ಪ್ರಧಾನಿ ಮಂಡಿಯೂರಿ ವರ್ಣಭೇದ ನೀತಿ ವಿರೋಧಿ ಪ್ರತಿಭಟನೆಯನ್ನು ಬೆಂಬಲಿಸಿದರು. ಇದರಿಂದ ಸಂತಸಗೊಂಡ ಪ್ರತಿಭಟನಾಕಾರರು ಪ್ರಧಾನಿಗೆ ಧನ್ಯವಾದ ಅರ್ಪಿಸಿದರು.

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ

ಈ ವೇಳೆ ಮಾತನಾಡಿದ ಅವರು, ಕಳೆದ ಕೆಲ ದಿನಗಳಲ್ಲಿ ಅಮೆರಿಕದಲ್ಲಿ ಏನೆಲ್ಲ ನಡೆಯುತ್ತಿದೆ ಎಂದು ಕೆನಡಾ ನಾಗರಿಕರು ನೋಡುತ್ತಿದ್ದಾರೆ ಎಂದರು. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕಪ್ಪು ವರ್ಣೀಯನ ಹತ್ಯೆ ಸಂಬಂಧ ಪ್ರತಿಭಟಿಸುತ್ತಿರುವವರ ವಿರುದ್ಧ ಅಶ್ರುವಾಯು ಪ್ರಯೋಗಿಸಿದ ಬಗ್ಗೆ ಕೇಳಿದಾಗ ಟ್ರುಡೊ ಕೆಲ ಸೆಕೆಂಡುಗಳ ಕಾಲ ಪ್ರತಿಕ್ರಿಯೆ ನೀಡುವಲ್ಲಿ ನಿಧಾನಿಸಿದರು.

ಕೆನಡಾದಲ್ಲಿ ಪ್ರತಿಭಟನೆ

ಜಾರ್ಜ್​ ಫ್ಲಾಯ್ಡ್​ ಹತ್ಯೆ ಸಂಬಂಧ ಅಮೆರಿಕದ ಹಲವು ನಗರಗಳಲ್ಲಿ ವರ್ಣಭೇದ ನೀತಿ ಮತ್ತು ಪೊಲೀಸ್ ದೌರ್ಜನ್ಯದ ವಿರುದ್ಧ ಭಾರಿ ಮಟ್ಟದ ಆಕ್ರೋಶ ವ್ಯಕ್ತವಾಗುತ್ತಿದೆ. ಹೀಗಾಗಿ ಕೆನಡಾದಲ್ಲೂ ಈ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ.

ಮಂಡಿಯೂರಿ ನಿಂತು ಪ್ರತಿಭಟನೆ

ಇನ್ನೊಂದೆಡೆ ಟೊರೊಂಟೊ ಪೊಲೀಸ್ ಮುಖ್ಯಸ್ಥ ಮಾರ್ಕ್ ಸೌಂಡರ್ಸ್ ಹಾಗೂ ಇತರ ಅಧಿಕಾರಿಗಳು ಪ್ರತಿಭಟನಾಕಾರರನ್ನು ಭೇಟಿಯಾದರು. ನಂತರ ಟೋಪಿ ತೆಗೆದು, ಪೊಲೀಸ್ ಪ್ರಧಾನ ಕಚೇರಿಯ ಬಳಿ ಮೊಣಕಾಲೂರಿ ಪ್ರತಿಭಟನೆ ಬೆಂಬಲಿಸಿದರು.

ಪೋಸ್ಟರ್​ ಹಿಡಿದು ಪ್ರತಿಭಟಿಸುತ್ತಿರುವ ಜನ

ABOUT THE AUTHOR

...view details