ವಾಷಿಂಗ್ಟನ್:ಯುಎಸ್‌ನಲ್ಲಿ ವ್ಯಾಪಕ ಬಳಕೆಗಾಗಿ ಉತ್ಪಾದಿಸಲಾಗಿರುವ ಕೋವಿಡ್-19 ಲಸಿಕೆಯನ್ನು ಹೊತ್ತೊಯ್ಯುತ್ತಿರುವ ಲಾರಿಗಳು ಇಂದು ಮಿಚಿಗನ್ ಲಸಿಕೆ ಉತ್ಪಾದನಾ ಘಟಕದಿಂದ ಹೊರಬಂದಿವೆ. ರಾಷ್ಟ್ರವನ್ನು ವ್ಯಾಪಿಸಿರುವ ಕೊರೊನಾ ಮಹಾಮಾರಿಗೆ ಅಂತ್ಯ ಕಾಣಿಸುವ ಉದ್ದೇಶದಿಂದ ತಯಾರಿಸಲಾಗಿರುವ ಲಸಿಕೆಗಳನ್ನು ಹೊತ್ತೊಯ್ಯುತ್ತಿರುವ ಈ ಲಾರಿಗಳು ಒಂದು ದಿನದ ನಂತರ ದೇಶದ ವಿವಿಧ ಪ್ರದೇಶಗಳನ್ನು ತಲುಪಲಿವೆ.
ಅಮೆರಿಕದ ಮೊದಲ ಕೋವಿಡ್-19 ಲಸಿಕೆಗಳನ್ನು ಹೊತ್ತು ಹೊರಟ ಟ್ರಕ್ಗಳು - America's first corona vaccine
ಫೈಜರ್ ಲಸಿಕೆಯ ಸಾಗಣೆ ಮೂಲಕ ಅಮೆರಿಕ ಇತಿಹಾಸದಲ್ಲೇ ಅತಿದೊಡ್ಡ ವ್ಯಾಕ್ಸಿನೇಷನ್ ಪ್ರಯತ್ನ ಪ್ರಾರಂಭಿಸಿದೆ. ಇದು ವಿಶ್ವದಾದ್ಯಂತ 1.6 ಮಿಲಿಯನ್ ಜನರನ್ನು ಕೊಂದು 71 ಮಿಲಿಯನ್ ಜನರನ್ನು ಅನಾರೋಗ್ಯಕ್ಕೀಡುಮಾಡಿದ ಕೊರೊನಾ ಸಾಂಕ್ರಾಮಿಕ ರೋಗವನ್ನು ಹತ್ತಿಕ್ಕುವ ಉದ್ದೇಶ ಹೊಂದಿದೆ.
ಅಮೆರಿಕಾದ 'ಮೊದಲ ಕೋವಿಡ್-19 ಲಸಿಕೆ' ಗಳನ್ನು ಹೊತ್ತು ಹೊರಟ ಟ್ರಕ್ಗಳು
ಫೈಜರ್ ಲಸಿಕೆಯ ಸಾಗಣೆ ಮೂಲಕ ಅಮೆರಿಕ ಇತಿಹಾಸದಲ್ಲೇ ಅತಿದೊಡ್ಡ ವ್ಯಾಕ್ಸಿನೇಷನ್ ಪ್ರಯತ್ನವನ್ನು ಪ್ರಾರಂಭಿಸಿದಂತಾಗುತ್ತದೆ. ಇದು ವಿಶ್ವದಾದ್ಯಂತ 1.6 ಮಿಲಿಯನ್ ಜನರನ್ನು ಕೊಂದು 71 ಮಿಲಿಯನ್ ಜನರನ್ನು ಅನಾರೋಗ್ಯಕ್ಕೀಡುಮಾಡಿದ ಕೊರೊನಾ ಸಾಂಕ್ರಾಮಿಕ ರೋಗವನ್ನು ಹತ್ತಿಕ್ಕುವ ಉದ್ದೇಶ ಹೊಂದಿದೆ.
ಆರಂಭದಲ್ಲಿ ಸುಮಾರು 3 ಮಿಲಿಯನ್ ಡೋಸ್‌ಗಳನ್ನು ಕಳುಹಿಸಲಾಗಿದ್ದು, ಆರೋಗ್ಯ ಕಾರ್ಯಕರ್ತರು, ನರ್ಸಿಂಗ್ ಹೋಂ ನಿವಾಸಿಗಳಿಗೆ ಮೊದಲ ಆದ್ಯತೆ ಎನ್ನಲಾಗಿದೆ.