ಕರ್ನಾಟಕ

karnataka

ETV Bharat / international

ಭಾರತದಲ್ಲಿನ ಕೋವಿಡ್​ ದುಃಸ್ಥಿತಿ ನಮ್ಮೆಲ್ಲರಿಗೂ ಎಚ್ಚರಿಕೆಯ ಗಂಟೆ - ಯುನಿಸೆಫ್​ - ಭಾರತದಲ್ಲಿನ ಕೋವಿಡ್-19​ ದುಸ್ಥಿತಿ

ಭಾರತಕ್ಕೆ ಎಲ್ಲಾ ರಾಷ್ಟ್ರಗಳು ಸಹಾಯ ಮಾಡಿಲ್ಲವೆಂದರೆ ಪ್ರಪಂಚದಾದ್ಯಂತ ವೈರಸ್ ಸಂಬಂಧಿತ ಸಾವುಗಳು, ವೈರಸ್ ರೂಪಾಂತರಗಳು ಪ್ರತಿಧ್ವನಿಸುತ್ತದೆ ಎಂದು ಯುನಿಸೆಫ್ ಎಚ್ಚರಿಸಿದೆ.

UNICEF
ಯುನಿಸೆಫ್​

By

Published : May 6, 2021, 2:34 PM IST

ನ್ಯೂಯಾರ್ಕ್​:ಭಾರತದಲ್ಲಿನ ಕೋವಿಡ್-19​ ದುಃಸ್ಥಿತಿಯು ನಮ್ಮೆಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಹೇಳಿದೆ.

ಸಂಕಷ್ಟದಲ್ಲಿರುವ ಭಾರತಕ್ಕೆ ಎಲ್ಲ ರಾಷ್ಟ್ರಗಳು ಸಹಾಯ ಮಾಡಿಲ್ಲವೆಂದರೆ ಪ್ರಪಂಚದಾದ್ಯಂತ ವೈರಸ್ ಸಂಬಂಧಿತ ಸಾವುಗಳು, ವೈರಸ್ ರೂಪಾಂತರಗಳು ಪ್ರತಿಧ್ವನಿಸುತ್ತದೆ ಎಂದು ಯುನಿಸೆಫ್ ಕಾರ್ಯನಿರ್ವಾಹಕ ನಿರ್ದೇಶಕ ಹೆನ್ರಿಯೆಟಾ ಫೋರ್ ಎಚ್ಚರಿಕೆ ನೀಡಿದ್ದಾರೆ.

ಯುನಿಸೆಫ್ ಈಗಾಗಲೇ ಭಾರತಕ್ಕೆ 2 ಮಿಲಿಯನ್ ಫೇಸ್​ ಶೀಲ್ಡ್​, 2 ಲಕ್ಷ ಸರ್ಜಿಕಲ್​ ಮಾಸ್ಕ್​​​ಗಳನ್ನು ಒಳಗೊಂಡಂತೆ ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಭಾರತಕ್ಕೆ ಕಳುಹಿಸಿದೆ. ದಕ್ಷಿಣ ಏಷ್ಯಾದಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು, ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಇದನ್ನೂ ಓದಿ: ದೇಶದಲ್ಲಿ ಹೊಸದಾಗಿ 4.12 ಲಕ್ಷ ಜನರಿಗೆ ಅಂಟಿದ ವೈರಸ್; ಒಂದೇ ದಿನ 3,980 ಮಂದಿ ಬಲಿ

ವಿಶ್ವದ ಕೋವಿಡ್​ ಪೀಡಿತ ರಾಷ್ಟ್ರಗಳ ಪೈಕಿ ದಿನವೊಂದರಲ್ಲಿ ಅತೀ ಹೆಚ್ಚು ಸಾವು-ನೋವು ಭಾರತದಲ್ಲಿ ವರದಿಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 4,12,262 ಕೇಸ್​ಗಳು ಪತ್ತೆಯಾಗಿದ್ದರೆ, 3,980 ಮಂದಿ ವೈರಸ್​ನಿಂದಾಗಿ ಪ್ರಾಣಬಿಟ್ಟಿದ್ದಾರೆ. ಭಾರತದಲ್ಲೀಗ ಕೋವಿಡ್​ ಸೋಂಕಿತರ ಸಂಖ್ಯೆ 2,10,77,410ಕ್ಕೆ ಹಾಗೂ ಮೃತರ ಸಂಖ್ಯೆ 2,30,168ಕ್ಕೆ ಹೆಚ್ಚಳವಾಗಿದೆ.

ABOUT THE AUTHOR

...view details