ಕರ್ನಾಟಕ

karnataka

ETV Bharat / international

ಟೊರ್ನಾಡೋ ರೌದ್ರಾವತಾರ... ಸಾವು, ನೋವುಗಳ ಮಧ್ಯೆ ನೂರಾರು ಜನ ಹರೋಹರ!

ಬ್ಯೂರಿಗಾರ್ಡ್​: ಅಮೆರಿಕದ ಅಲಬಾಮಾ ರಾಜ್ಯಕ್ಕೆ ಟೊರ್ನಾಡೋ ತುಫಾನ್ ಅಪ್ಪಳಿಸಿದ್ದು, ಜನರು ತತ್ತರಿಸಿದ್ದಾರೆ. ಈ ತುಫಾನ್​ಗೆ ಸುಮಾರು 22 ಜನ ಮೃತಪಟ್ಟಿದ್ದು, ನೂರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಕೃಪೆ: Twitter

By

Published : Mar 4, 2019, 2:23 PM IST

ಆಗ್ನೇಯ ಅಲಬಾಮ್​ನಲ್ಲಿ ಟೊರ್ನಾಡೋ ತುಫಾನ್​ಗೆ ಕೆಲ ಮನೆಗಳು ಹಾರಿ ಹೋಗಿದ್ದು, ಇನ್ನು ಕೆಲ ಮನೆಗಳು ಕುಸಿದು ಬಿದ್ದಿವೆ. ಕುಸಿದು ಬಿದ್ದಿರುವ ಕಟ್ಟಡದ ಅವೇಶಷಗಳಡಿ ಸಿಲುಕಿರುವ ಜನರ ರಕ್ಷಣೆಗೆ ರಕ್ಷಣಾ ಪಡೆ ಕಾರ್ಯಾಚರಣೆ ಕೈಗೊಂಡಿದೆ.

ಮಳೆ ಮತ್ತು ಬಿರುಗಾಳಿಗೆ ಆಗ್ನೇಯ ಅಲಬಾಮ್ ತತ್ತರಿಸಿದೆ. ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸರ್ಕಾರ ಅನೇಕ ಕ್ರಮ ಕೈಗೊಂಡಿದೆ. ಈಗಾಗಲೇ 22 ಜನ ತುಫಾನ್​ಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಭಾವಿಸುತ್ತಿದ್ದಾರೆ.

ತುಫಾನ್​ಗೆ ಅನೇಕರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸರ್ಕಾರ ಅನುವು ಮಾಡಿಕೊಟ್ಟಿದೆ. ರಸ್ತೆಯ ಮೇಲೆ ಮರಗಳು ಉರುಳಿ ಬಿದ್ದಿದ್ದು, ರಸ್ತೆ ಸಂಚಾರ ಸಂಪೂರ್ಣ ಸ್ಥಗೀತಗೊಂಡಿದೆ. ಮುನ್ನೆಚ್ಚೆರಿಕೆ ಕ್ರಮವಾಗಿ ವಿದ್ಯುತ್​ ಸಂಚಾರ ಸ್ಥಗಿತ ಮಾಡಲಾಗಿದೆ.

ಇನ್ನು ಜಾರ್ಜಿಯಾ, ಫ್ಲೋರಿಡಾ ಮತ್ತು ದಕ್ಷಿಣ ಕೆರೋಲಿನಾ ಪ್ರಾಂತ್ಯಕ್ಕೆ ಟೊರ್ನಾಡೋ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಅಲ್ಲಿನ ಹವಾಮಾನ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details