ಕಪ್ಪು ವರ್ಣೀಯ ನಾಗರಿಕ ಜಾರ್ಜ್ ಫ್ಲಾಯ್ಡ್ ಅವರು ಅಮೆರಿಕ ಪೊಲೀಸರ ಕಸ್ಟಡಿಯಲ್ಲಿರುವಾಗ ಸಾವನ್ನಪ್ಪಿದ್ದ ನಂತರ ಅಮೆರಿಕ ಮಾತ್ರವಲ್ಲದೆ ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ಜನಾಂಗೀಯ ದೌರ್ಜನ್ಯ ಖಂಡಿಸಿ #Black live matter ಹೆಸರಿನಲ್ಲಿ ಉಗ್ರ ಪ್ರತಿಭಟನೆಗಳು ನಡೆಯುತ್ತಿವೆ. ಈ ಮಧ್ಯೆ ಅಮೆರಿಕ, ಇಂಗ್ಲೆಂಡ್ ಹಾಗೂ ಬೆಲ್ಜಿಯಂ ದೇಶಗಳಲ್ಲಿ ಸ್ಥಾಪಿಸಲಾಗಿದ್ದ ಗುಲಾಮರ ವ್ಯಾಪಾರ ಹಾಗೂ ಅದಕ್ಕೆ ಸಂಬಂಧಿಸಿದ ಒಳಸಂಚಿನ ಭಾಗವಾಗಿದ್ದವರ ಪ್ರತಿಮೆ ಹಾಗೂ ಸ್ಮಾರಕಗಳನ್ನು ಪ್ರತಿಭಟನಾಕಾರರು ನಾಶಪಡಿಸುತ್ತಿದ್ದಾರೆ. ಜಾರ್ಜ್ ಫ್ಲಾಯ್ಡ್ ಅವರ ಸಾವಿನ ನಂತರ ಆರಂಭವಾದ ಪ್ರತಿಭಟನೆಗಳ ನಂತರದ ಅವಧಿಯಲ್ಲಿ ಅಮೆರಿಕ, ಇಂಗ್ಲೆಂಡ್ ಹಾಗೂ ಬೆಲ್ಜಿಯಂ ದೇಶಗಳಲ್ಲಿ ತೆರವುಗೊಳಿಸಲಾದ ಪ್ರತಿಮೆ ಹಾಗೂ ಸ್ಮಾರಕಗಳ ವಿವರ ಇಲ್ಲಿದೆ.
ಅಮೆರಿಕದಲ್ಲಿ ತೆರವು, ವಿರೂಪಗೊಳಿಸಲಾದ ಪ್ರತಿಮೆ ಹಾಗೂ ಸ್ಮಾರಕಗಳ ಪಟ್ಟಿ
ರಾಜ್ಯ: ಟೆನಿಸ್ಸಿ, ವ್ಯಕ್ತಿಯ ಪ್ರತಿಮೆ/ ಸ್ಮಾರಕ: ಎಡ್ವರ್ಡ್ ಕಾರ್ಮ್ಯಾಕ್, ವಿವರ: ಎಡ್ವರ್ಡ್ ಕಾರ್ಮ್ಯಾಕ್ ಓರ್ವ ರಾಜಕಾರಣಿಯಾಗಿದ್ದರು ಹಾಗೂ ಗುಂಪು ಹತ್ಯೆಗಳನ್ನು ಸಮರ್ಥಿಸಿ ಇವರು ವರದಿಗಳನ್ನು ಬರೆದಿದ್ದರು ಎಂಬ ಆರೋಪವಿದೆ. ಮೇ 31 ರಂದು ನ್ಯಾಶವಿಲ್ಲೆಯಲ್ಲಿರುವ ಇವರ ಪ್ರತಿಮೆಯನ್ನು ವಿರೂಪಗೊಳಿಸಲಾಗಿತ್ತು. ಇವರ ಹೊಸ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ: ಅಲಾಬಾಮಾ, ವ್ಯಕ್ತಿಯ ಪ್ರತಿಮೆ/ ಸ್ಮಾರಕ: ಒಕ್ಕೂಟ ನೌಕಾಪಡೆಯ ಮುಖ್ಯಸ್ಥ ಕ್ಯಾಪ್ಟನ್ ಚಾರ್ಲ್ಸ್ ಲಿನ್, ವಿವರ: ಮೇ 31 ರಂದು ಬರ್ಮಿಂಗ್ಹ್ಯಾಂ ನ ಲಿನ್ ಪಾರ್ಕ್ನಲ್ಲಿರುವ ಚಾರ್ಲ್ಸ್ ಲಿನ್ ಅವರ 8 ಅಡಿ ಎತ್ತರದ ಕಂಚಿನ ಮೂರ್ತಿಯನ್ನು ಹಾಳುಗಡವಲಾಯಿತು.
ರಾಜ್ಯ: ವರ್ಜೀನಿಯಾ, ವಿವರ: ಜೂನ್ 2 ರಂದು ಅಲೆಕ್ಸಾಂಡ್ರಿಯಾ ನಗರದ ಸ್ಥಳೀಯಾಡಳಿತವು 131 ವರ್ಷ ಪುರಾತನವಾಗಿದ್ದ ಒಕ್ಕೂಟದ ಸೈನಿಕನೋರ್ವನ ಪ್ರತಿಮೆಯನ್ನು ತೆರವುಗೊಳಿಸಿತು.
ರಾಜ್ಯ: ಪೆನ್ಸಿಲ್ವೇನಿಯಾ, ಕಾನ್ಫೆಡರೇಟ್ ಜನರಲ್ ವಿಲಿಯಮ್ಸ್ ಕಾರ್ಟರ್ ವಿಕ್ಯಾಮ್, ವಿವರ: ಜೂನ್ 6 ರಂದು ರಿಚ್ಮಂಡ್ ನಗರದ ಮನ್ರೋ ಪಾರ್ಕ್ನಲ್ಲಿದ್ದ ಕಾನ್ಫೆಡರೇಟ್ ಜನರಲ್ ವಿಲಿಯಮ್ಸ್ ಕಾರ್ಟರ್ ವಿಕ್ಯಾಮ್ ಅವರ ಪ್ರತಿಮೆಯನ್ನು ಪ್ರತಿಭಟನಾಕಾರರು ಧ್ವಂಸಗೊಳಿಸಿದರು.
ರಾಜ್ಯ: ಕೆಂಟುಕಿ, ವ್ಯಕ್ತಿಯ ಪ್ರತಿಮೆ/ ಸ್ಮಾರಕ: ಕಾನ್ಫೆಡರೇಟ್ ಸೈನಿಕ ಜಾನ್ ಬಿ. ಕ್ಯಾಸಲ್ಮ್ಯಾನ್ ಅವರ ಪ್ರತಿಮೆ, ವಿವರ: ಜೂನ್ 8 ರಂದು ಲೂಯಿಸವಿಲ್ಲೆಯ ಚೆರೋಕಿ ವೃತ್ತದಲ್ಲಿರುವ ಕಾನ್ಫೆಡರೇಟ್ ಸೈನಿಕ ಜಾನ್ ಬಿ. ಕ್ಯಾಸಲ್ಮ್ಯಾನ್ ಅವರ ಪ್ರತಿಮೆಯನ್ನು ತೆರವುಗೊಳಿಸಲಾಯಿತು.