ಕರ್ನಾಟಕ

karnataka

ETV Bharat / international

ಕೊರೊನಾ ಸೋಂಕಿನ ಜೊತೆ ಲಕ್ಷಣಗಳಲ್ಲೂ ಏರಿಕೆ.. ಮತ್ತೆ ಮೂರು ಹೊಸ ಲಕ್ಷಣಗಳು ಸೇರ್ಪಡೆ - ಕೊರೊನಾ ಸೋಂಕು ಲಕ್ಷಣಗಳ ಪಟ್ಟಿ

ಅಮೆರಿಕದ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಸಂಸ್ಥೆ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಕೊರೊನಾ ಸೋಂಕಿನ ಲಕ್ಷಣಗಳ ಪಟ್ಟಿಗೆ ಮತ್ತೆ ಮೂರು ಲಕ್ಷಣಗಳನ್ನು ಸೇರಿಸಿದೆ..

3 new symptoms of Covid-19
ಮತ್ತೆ ಮೂರು ಹೊಸ ಲಕ್ಷಣಗಳು ಸೇರ್ಪಡೆ

By

Published : Jun 28, 2020, 8:37 PM IST

ನ್ಯೂಯಾರ್ಕ್ :ಒಂದೆಡೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ರೆ ಮತ್ತೊಂದೆಡೆ ಸೋಂಕಿನ ಲಕ್ಷಣಗಳ ಪಟ್ಟಿ ಕೂಡ ಹೆಚ್ಚಾಗುತ್ತಿದೆ. ಮತ್ತೆ ಮೂರು ಹೊಸ ಲಕ್ಷಣಗಳನ್ನು ಪಟ್ಟಿಗೆ ಸೇರಿಸಲಾಗಿದೆ.

ಜ್ವರ, ಕೆಮ್ಮು, ಆಯಾಸ, ಉಸಿರಾಟದ ತೊಂದರೆ, ಸ್ನಾಯುಗಳಲ್ಲಿ ನೋವು, ಶೀತ, ಗಂಟಲು ನೋವು ವಾಸನೆ ಮತ್ತು ರುಚಿ ಗೊತ್ತಾಗದಿರುವುದನ್ನೂ ಕೊರೊನಾ ಸೋಂಕಿನ ಲಕ್ಷಣಗಳ ಪಟ್ಟಿಗೆ ಸೇರಿಸಲಾಗಿತ್ತು. ಇದೀಗ ನಿರಂತರವಾಗಿ ಮೂಗು ಸೋರುವುದು, ವಾಕರಿಕೆ ಅಥವಾ ವಾಂತಿಯಾಗುವುದು ಮತ್ತು ಅತಿಸಾರ ಭೇದಿಯನ್ನೂ ಕೊರೊನಾ ಸೋಂಕುಗಳ ಪಟ್ಟಿಗೆ ಸೇರಿಸಲಾಗಿದೆ.

ಅಮೆರಿಕದ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಸಂಸ್ಥೆಯ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ), ಅಧಿಕೃತ ವೆಬ್‌ಸೈಟ್‌ನಲ್ಲಿ ಕೊರೊನಾ ಸೋಂಕಿನ ರೋಗದ ನೂತನ ಲಕ್ಷಣಗಳನ್ನು ಪಟ್ಟಿ ಮಾಡಿದೆ. ಅಲ್ಲದೆ ಕೋವಿಡ್‌-19 ವೈರಸ್ ಬಗ್ಗೆ ಅಧ್ಯಯನಗಳು ಮುಂದುವರೆದಿದ್ದು, ಈ ಪಟ್ಟಿಯು ಪರಿಷ್ಕರಣೆಗೊಳ್ಳಲಿದೆ ಎಂದು ಹೇಳಿದೆ.

ಆರಂಭದಲ್ಲಿ ಕೇವಲ ಮೂರು ಲಕ್ಷಣಗಳನ್ನು ಕೊರೋನಾ ಸೋಂಕಿನ ಲಕ್ಷಣಗಳು ಎಂದು ಗುರುತಿಸಲಾಗಿತ್ತು. ಬಳಿಕ ಅದರ ಸಂಖ್ಯೆ ಏರಿತ್ತು. ಇದೀಗ ಈ ಪಟ್ಟಿಗೆ ಮತ್ತೆ ಮೂರು ಹೊಸ ಲಕ್ಷಣಗಳು ಸೇರ್ಪಡೆಯಾಗಿವೆ.

ABOUT THE AUTHOR

...view details