ಕೆರ್ಮಾನ್ (ಇರಾನ್):ಅಮೆರಿಕ ಪಡೆಗಳು ಜನರಲ್ ಖ್ವಾಸ್ಸೆಂ ಸೊಲೈಮನಿ ಅವರನ್ನು ಹತ್ಯೆಗೈದ ನಂತರ ಇರಾನ್ನ ಕ್ವಾಡ್ಸ್ ಫೋರ್ಸ್ನ ನಾಯಕತ್ವ ವಹಿಸಿಕೊಂಡಿರುವ ಜನರಲ್ ಇಸ್ಮಾಯಿಲ್ ಘಾನಿ ಅಮೆರಿಕ ಸೇನೆಯ ವಿರುದ್ಧ ಹರಿಹಾಯ್ದಿದ್ದಾರೆ.
ಬುಧವಾರ ಖ್ವಾಸ್ಸೆಂ ಸೋಲೈಮನಿಯ ಸಾವಿನ ಒಂದು ವರ್ಷದ ನೆನಪಿನ ಕಾರ್ಯಕ್ರಮದಲ್ಲಿ ಮಾತನಾಡಿದ ಇಸ್ಮಾಯಿಲ್ ಘಾನಿ ಇರಾನ್ನಿಂದ ಅಮೆರಿಕ ಸೈನಿಕರನ್ನು ಹೊರಹಾಕಬೇಕು. ಅದಕ್ಕೂ ಮೊದಲು ಅವರ ಮೂಳೆಗಳನ್ನು ಪುಡಿ ಪುಡಿಗೊಳಿಸಬೇಕು ಎಂದು ತನ್ನ ಹಿಂಬಾಲಕರಿಗೆ ಕರೆ ನೀಡಿದ್ದಾರೆ.