ಕರ್ನಾಟಕ

karnataka

ETV Bharat / international

ಟೆಕ್ಸಾಸ್ ವಿದ್ಯುತ್ ಕಡಿತದ ನಂತರ ರಾಜೀನಾಮೆ ನೀಡಲು ಮುಂದಾದ ಉನ್ನತ ಮಂಡಳಿಯ ನಾಯಕರು - ಟೆಕ್ಸಾಸ್​ನ ಎಲೆಕ್ಟ್ರಿಕ್ ರಿಯಾಬಿಲಿಟಿ ಮಂಡಳಿ ಸದಸ್ಯರು ರಾಜೀನಾಮೆ

ಅಮೆರಿಕದ ಟೆಕ್ಸಾಸ್‌ನಲ್ಲಿ ತೀವ್ರ ಶೀತಗಾಳಿ ಬೀಸಿದ ಪರಿಣಾಮ, ಜನಜೀವನ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಅಮೆರಿಕದ ಆಗ್ನೇಯ ಭಾಗದಲ್ಲಿನ ಶೀತ ಚಂಡ ಮಾರುತದಿಂದ ಭಾರಿ ಅನಾಹುತ ಸಂಭವಿಸುತ್ತಿದೆ..

ಟೆಕ್ಸಾಸ್ ವಿದ್ಯುತ್ ಕಡಿತ
ಟೆಕ್ಸಾಸ್ ವಿದ್ಯುತ್ ಕಡಿತ

By

Published : Feb 24, 2021, 3:40 PM IST

ಆಸ್ಟಿನ್ :ಕಳೆದ ವಾರ ಅಮೆರಿಕದ ದಕ್ಷಿಣದ ರಾಜ್ಯಗಳು ಚಳಿಗೆ ನಲುಗಿ ಹೋಗಿವೆ. ಆದರೆ, ಇದೇ ಹೊತ್ತಿನಲ್ಲಿ ಜನರಿಗೆ ಕರೆಂಟ್ ಕೂಡ ಕೈಕೊಟ್ಟಿದೆ. ಅಮೆರಿಕಾದ ಟೆಕ್ಸಾಸ್​​ನಲ್ಲಿ ಚಳಿ ಹೆಚ್ಚಾದಾಗ 4 ದಶಲಕ್ಷಕ್ಕೂ ಹೆಚ್ಚು ಗ್ರಾಹಕರು ವಿದ್ಯುತ್ ಸಂಪರ್ಕ ಕಳೆದುಕೊಂಡಿದ್ದಾರೆ. ಇದರ ವೈಫಲ್ಯತೆ ಹಿನ್ನೆಲೆ ಟೆಕ್ಸಾಸ್‌ನ ಉನ್ನತ ಮಂಡಳಿಯ ಮುಖಂಡರು ಮಂಗಳವಾರ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.

ಚೇರ್‌ವುಮನ್ ಸ್ಯಾಲಿ ಟಾಲ್ಬರ್ಗ್ ಸೇರಿದಂತೆ ಮಂಡಳಿಯ ಒಟ್ಟು ಐದು ಸದಸ್ಯರು ರಾಜೀನಾಮೆ ನೀಡುತ್ತಿದ್ದಾರೆ. ಟೆಕ್ಸಾಸ್​ನ ಎಲೆಕ್ಟ್ರಿಕ್ ರಿಯಾಬಿಲಿಟಿ ಮಂಡಳಿ ಸಾರ್ವಜನಿಕರಿಂದ ಸಾಕಷ್ಟು ಟೀಕೆಗಳನ್ನು ಎದುರಿಸಿದ ನಂತರ ಈ ನಿರ್ಧಾರಕ್ಕೆ ಬಂದಿದೆ.

ಟೆಕ್ಸಾಸ್ ವಿದ್ಯುತ್ ಕಡಿತ

ಓದಿ:ಜೈಲಿನಲ್ಲಿ ಕೈದಿಗಳ ನಡುವೆ ಮಾರಾಮಾರಿ: 75 ಜನರ ಸಾವು

ನಿರ್ಗಮಿಸುವ ಮಂಡಳಿಯ ನಾಲ್ವರು ಸದಸ್ಯರು ಗ್ರಿಡ್ ಸದಸ್ಯರಿಗೆ ಮತ್ತು ERCOTನ ಮೇಲ್ವಿಚಾರಣೆಯ ರಾಜ್ಯದ ಸಾರ್ವಜನಿಕ ಉಪಯುಕ್ತತೆ ಆಯೋಗಕ್ಕೆ ಈ ಬಗ್ಗೆ ಪತ್ರವನ್ನು ಬರೆದಿದ್ದಾರೆ. ERCOT ಮಂಡಳಿಯಲ್ಲಿ ಒಟ್ಟು 16 ಸದಸ್ಯರಿದ್ದಾರೆ. ಇದು ಗ್ರಿಡ್ ವ್ಯವಸ್ಥಾಪಕರ ದಿನನಿತ್ಯದ ಕಾರ್ಯಾಚರಣೆಗಳನ್ನು ನಿರ್ವಹಿಸಲು ಅಧಿಕಾರಿಗಳನ್ನು ನೇಮಿಸುತ್ತದೆ.

ಅಮೆರಿಕದ ಟೆಕ್ಸಾಸ್‌ನಲ್ಲಿ ತೀವ್ರ ಶೀತಗಾಳಿ ಬೀಸಿದ ಪರಿಣಾಮ, ಜನಜೀವನ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಅಮೆರಿಕದ ಆಗ್ನೇಯ ಭಾಗದಲ್ಲಿನ ಶೀತ ಚಂಡ ಮಾರುತದಿಂದ ಭಾರಿ ಅನಾಹುತ ಸಂಭವಿಸುತ್ತಿದೆ. ವಿದ್ಯುತ್ ಪೂರೈಕೆ ಸ್ಥಗಿತಗೊಂಡು ಲಕ್ಷಾಂತರ ಮಂದಿ ಮತ್ತಷ್ಟು ತೊಂದರೆಗೆ ಸಿಲುಕಿದ್ದರು.

ABOUT THE AUTHOR

...view details