ಹೈದರಾಬಾದ್ :ಜಾಗತಿಕ ಕೊರೊನಾ ವೈರಸ್ ಪ್ರಕರಣಗಳು 140.4 ಮಿಲಿಯನ್ ಗಡಿ ದಾಟಿದೆ. ಸಾವುಗಳು 3 ಮಿಲಿಯನ್ಗಿಂತ ಹೆಚ್ಚಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.
ಭಾರತವು ಬ್ರೆಜಿಲ್, ಫ್ರಾನ್ಸ್, ರಷ್ಯಾ, ಇಟಲಿ ಮತ್ತು ಯುಕೆಗಳನ್ನು ಮೀರಿಸಿ, ಕೋವಿಡ್ ಪೀಡಿತ ಎರಡನೇ ದೇಶವಾಗಿದೆ. ಭಾರತದಲ್ಲಿ ಒಟ್ಟು ಕೋವಿಡ್-19 ಪ್ರಕರಣ 15.6 ಮಿಲಿಯನ್ ತಲುಪಿವೆ. ಇಂದು ದೇಶದಲ್ಲಿ 2,95,041 ಹೊಸ ಕೋವಿಡ್-19 ಪ್ರಕರಣ ವರದಿಯಾಗಿವೆ.
ಇದು ಒಂದು ದಿನದಲ್ಲಿ ಪತ್ತೆಯಾದ ಈವರೆಗಿನ ಅತಿ ಹೆಚ್ಚು ಪ್ರಕರಣಗಳಾಗಿವೆ. ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1,56,16,130ಕ್ಕೆ ಏರಿಕೆಯಾಗಿದೆ. 21,57,538 ಸಕ್ರಿಯ ಪ್ರಕರಣಗಳಿವೆ. ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್-19 ಪ್ರಕರಣಗಳನ್ನು ಹೊಂದಿರುವ 5 ಹೆಚ್ಚು ಪೀಡಿತ ರಾಷ್ಟ್ರಗಳ ಪಟ್ಟಿ ಇಲ್ಲಿದೆ.
ಯುನೈಟೆಡ್ ಸ್ಟೇಟ್ಸ್ (ಯುಎಸ್):
- 31.7 ಮಿಲಿಯನ್ ಕೊರೊನಾ ವೈರಸ್ ಪ್ರಕರಣಗಳೊಂದಿಗೆ ಯುನೈಟೆಡ್ ಸ್ಟೇಟ್ಸ್ ಅಗ್ರಸ್ಥಾನದಲ್ಲಿದೆ.
- ಯುನೈಟೆಡ್ ಸ್ಟೇಟ್ಸ್ನಲ್ಲಿ ಭಾನುವಾರ 31,793,035 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.
- ಯುನೈಟೆಡ್ ಸ್ಟೇಟ್ಸ್ನಲ್ಲಿ ಕೊರೊನಾದಿಂದಾಗಿ ಕನಿಷ್ಠ 568,470 ಜನ ಪ್ರಾಣ ಕಳೆದುಕೊಂಡಿದ್ದಾರೆ.