ಕರ್ನಾಟಕ

karnataka

ETV Bharat / international

ಮೊಬೈಲ್​ ಬ್ಯಾಟರಿ ಉಳಿಸಲು 5ಜಿ ಆಫ್​ ಮಾಡಿ ಎಂದ ವೆರಿಝೋನ್ ಕಂಪನಿ - Verizon's 5G network

ಬ್ಯಾಟರಿಯನ್ನು ಉಳಿಸಲು ಇರುವ ಒಂದೇ ಒಂದು ಮಾರ್ಗವೆಂದರೆ, ಅದು ನಿಮ್ಮ ಮೊಬೈಲ್​ನಲ್ಲಿ 5ಜಿ ಯನ್ನು ಆಫ್​ ಮಾಡುವುದು ಎಂದು ವೆರಿಝೋನ್ ಕಂಪನಿ ಟ್ವೀಟ್​ ಮಾಡಿದೆ.

ಯುಎಸ್ ಟೆಲಿಕಾಂ ಸೇವಾ ಪೂರೈಕೆದಾರ ವೆರಿಝೋನ್ ಕಂಪನಿ
ಯುಎಸ್ ಟೆಲಿಕಾಂ ಸೇವಾ ಪೂರೈಕೆದಾರ ವೆರಿಝೋನ್ ಕಂಪನಿ

By

Published : Mar 1, 2021, 8:26 PM IST

ಸ್ಯಾನ್ ಫ್ರಾನ್ಸಿಸ್ಕೋ:ಜನರು ತಮ್ಮ ಮೊಬೈಲ್​ನ ಬ್ಯಾಟರಿಯನ್ನು ಉಳಿಸಲು 5ಜಿ ಯನ್ನು ಆಫ್​ ಮಾಡಿ ಎಂದು ಯುಎಸ್ ಟೆಲಿಕಾಂ ಸೇವಾ ಪೂರೈಕೆದಾರ ವೆರಿಝೋನ್ ಕಂಪನಿ ಸಲಹೆ ನೀಡಿದೆ.

ಬ್ಯಾಟರಿಯನ್ನು ಉಳಿಸಲು ಇರುವ ಒಂದೇ ಒಂದು ಮಾರ್ಗವೆಂದರೆ, ಅದು ನಿಮ್ಮ ಮೊಬೈಲ್​ನಲ್ಲಿ 5ಜಿ ಯನ್ನು ಆಫ್​ ಮಾಡುವುದು ಎಂದು ವೆರಿಝೋನ್ ಕಂಪನಿ ಟ್ವೀಟ್​ ಮಾಡಿದೆ. ಅಲ್ಲದೇ 5ಜಿ ನೆಟ್‌ವರ್ಕ್‌ಗೆ ಎಲ್‌ಟಿಇ ಯಾವಾಗಲೂ ಫಾಲ್‌ಬ್ಯಾಕ್ ಆಗಿ ಸಕ್ರಿಯಗೊಂಡಿರುವುದರಿಂದ, 4ಜಿ (ಅಥವಾ ಎಲ್‌ಟಿಇ) ಅನ್ನು ಆನ್ ಮಾಡುವ ಅಗತ್ಯವಿಲ್ಲ ಎಂದಿದೆ.

ಓದಿ:'78 ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ - 2021' ಪ್ರಕಟ: ವಿಜೇತರ ಪಟ್ಟಿ ಇಲ್ಲಿದೆ ನೋಡಿ

ವೆರಿಝೋನ್ ಹೊಸ ವೇಗದ ಸ್ಪೆಕ್ಟ್ರಮ್​​ಗಾಗಿ ಬಿಡ್ಡಿಂಗ್​ನಲ್ಲಿ 45 ಬಿಲಿಯನ್​ಗಿಂತ ಹೆಚ್ಚಿನ ಹಣವನ್ನು ಖರ್ಚು ಮಾಡಿದೆ ಮತ್ತು ಅದರ ಪ್ರತಿಸ್ಪರ್ಧಿ ಎಟಿ ಆ್ಯಂಡ್​ ಟಿ 23.4 ಬಿಲಿಯನ್ ಹಣ ಖರ್ಚು ಮಾಡಿದೆ.

ಅಲ್ಟ್ರಾ-ಫಾಸ್ಟ್ ಎಂಎಂ ವೇವ್ ವ್ಯಾಪ್ತಿಯನ್ನು ವಿಸ್ತರಿಸುವುದು ವೆರಿಝೋನ್​ನ ಒಂದು ಪ್ರಮುಖ ಆದ್ಯತೆಯಾಗಿದೆ. ಇದು ಪ್ರಸ್ತುತ ಯುಎಸ್​ನ ಕೆಲವು ನಗರಗಳ ಭಾಗಗಳಿಗೆ ಸೀಮಿತವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ABOUT THE AUTHOR

...view details