ಕರ್ನಾಟಕ

karnataka

ETV Bharat / international

ಉಪದೇಶಕ್ಕಿಂತ ಪ್ರಾಯೋಗಿಕವಾಗಿ ಮಾಡಿ ತೋರಿಸುವುದು ಮೌಲ್ಯಯುತ: ಮೋದಿ - Prime Minister Narendra Modi

ಭಾರತದಲ್ಲಿ ಕೋಟ್ಯಂತರ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಒದಗಿಸಲಾಗಿದೆ. ಜಲ ಸಂಪನ್ಮೂಲ ಅಭಿವೃದ್ಧಿ, ಜಲ ಸಂರಕ್ಷಣೆ ಹಾಗೂ ಮಳೆನೀರು ಕೊಯ್ಲಿನ ಅಭಿವೃದ್ಧಿಗೆ 'ಜಲ ಜೀವನ್' ಮಿಷನ್ ಆರಂಭಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ

By

Published : Sep 23, 2019, 9:46 PM IST

ನ್ಯೂಯಾರ್ಕ್​:ಮಾತನಾಡುವ, ಬೇರೆಯವರಿಗೆ ಉಪದೇಶ ಮಾಡುವ ಕಾಲ ಮುಗಿದಿದೆ. ಪ್ರಾಯೋಗಿಕವಾಗಿ ಮಾಡಿ ತೋರಿಸುವ ಬಹಳ ಮೌಲ್ಯಯುತವಾದುದು. ಅಂತಹ ಸಮಯ ನಮ್ಮ ಮುಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಜಾಗತಿಕ ಹವಾಮಾನ ಬದಲಾವಣೆ ಕುರಿತಂತೆ ಅಮೆರಿಕದ ನ್ಯೂಯಾರ್ಕ್​ನಲ್ಲಿ ನಡೆದ ಉನ್ನತ ಮಟ್ಟದ ಹವಾಮಾನ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತದಲ್ಲಿ ಕೋಟ್ಯಂತರ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಒದಗಿಸಲಾಗಿದೆ. ಜಲ ಸಂಪನ್ಮೂಲ ಅಭಿವೃದ್ಧಿ, ಜಲ ಸಂರಕ್ಷಣೆ ಹಾಗೂ ಮಳೆನೀರು ಕೊಯ್ಲಿನ ಅಭಿವೃದ್ಧಿಗೆ 'ಜಲ ಜೀವನ್' ಮಿಷನ್ ಆರಂಭಿಸಲಾಗಿದೆ ಎಂದರು.

ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

ಅಲ್ಲದೆ ಈ ವರ್ಷದ ಸ್ವಾತಂತ್ರ್ಯ ದಿನದಂದು, ಏಕ ಬಳಕೆ ಪ್ಲಾಸ್ಟಿಕ್​​ ಮುಕ್ತರಾಗಲು ಬೃಹತ್ ಆಂದೋಲನಕ್ಕೆ ಕರೆ ನೀಡಿದ್ದೇವೆ. ಈ ಆಂದೋಲನದಿಂದ ಪ್ಲಾಸ್ಟಿಕ್ ಬಳಕೆಯ ವಿರುದ್ಧ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಲು ಸಹಕಾರಿಯಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಮೋದಿ ಹೇಳಿದರು.

ಇನ್ನು ಯುಎನ್ ಜನರಲ್ ಅಸೆಂಬ್ಲಿಯಲ್ಲಿ ಯುಎನ್ ಸೆಕ್ರೆಟರಿ ಜನರಲ್ ವತಿಯಿಂದ ಈ ಉನ್ನತ ಮಟ್ಟದ ಹವಾಮಾನ ಕ್ರಿಯಾ ಶೃಂಗಸಭೆ ನಡೆದಿದ್ದು, ಜಗತ್ತಿನ ವಿವಿಧ 63 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ.

ABOUT THE AUTHOR

...view details