ವಾಷಿಂಗ್ಟನ್: ಟಿಕ್‌ಟಾಕ್ ಕಿರು ವಿಡಿಯೋ ಆ್ಯಪ್ ರದ್ದು ಮಾಡಲು ಆದೇಶಿಸಿರುವ ಟ್ರಂಪ್ ಅವರ ನಿರ್ಧಾರವನ್ನು ಕಂಪನಿ ಹಾಗೂ ನೌಕರರು ಕೋರ್ಟ್ ಮುಂದಿಡಲು ನಿರ್ಧರಿಸಿದ್ದಾರೆ.
ಅಮೆರಿಕದ ರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ ಮತ್ತು ಆರ್ಥಿಕತೆಗೆ ಬೆದರಿಕೆ ಇದೆ ಎಂದು ಕಳೆದ ವಾರ ಚೀನಾದ ಜನಪ್ರಿಯ ವಿಡಿಯೋ ಆ್ಯಪ್‌ಗಳಾದ ಟಿಕ್‌ಟಾಕ್ ಮತ್ತು ವಿಚಾಟ್ ಅನ್ನು ನಿಷೇಧಿಸುವ ಕಾರ್ಯಕಾರಿ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದರು. ಟ್ರಂಪ್ರ ಈ ಆದೇಶ ಅಸಂವಿಧಾನಿಕ ಎಂದು ಹೇಳಿರುವ ಟಿಕ್ ಟಾಕ್ ಹಾಗೂ ಯುಸ್ ನೌಕರರು ಇದರ ವಿರುದ್ಧ ಕಾನೂನಾತ್ಮಕವಾಗಿ ಹೋರಾಡಲು ತಯಾರಿ ನಡೆಸುತ್ತಿದ್ದಾರೆ ಎಂದು ನೌಕರರ ಪರ ವಕೀಲ ವಕೀಲ ಮೈಕ್ ಗಾಡ್ವಿನ್ ತಿಳಿಸಿದ್ದಾರೆ.