ಲಾಸ್ ಏಂಜಲೀಸ್: ರೋಲ್ಓವರ್ ವಾಹನ ಅಪಘಾತದಲ್ಲಿ ಗಾಯಗೊಂಡಿರುವ ಗಾಲ್ಫ್ ತಾರೆ ಟೈಗರ್ ವುಡ್ಸ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ಮತ್ತು ಅವರ ವ್ಯವಸ್ಥಾಪಕರು ತಿಳಿಸಿದ್ದಾರೆ.
ಕಾರಿನಲ್ಲಿ ಟೈಗರ್ ವುಡ್ಸ್ ಒಬ್ಬರೇ ಇದ್ದರು ಎಂದು ತಿಳಿದುಬಂದಿದೆ. ಇವರ ಕಾರು ರಸ್ತೆಯಿಂದ ಹಾರಿ ಹೋಗಿದ್ದರಿಂದ ವುಡ್ಸ್ ಕಾಲಿಗೆ ಗಂಭೀರ ಗಾಯಗಳಾಗಿವೆ. ಅದೃಷ್ಟವಶಾತ್ ಪ್ರಾಣಾಪಾಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಪಾಸಣೆ ನಡೆಸಿದ ಅಧಿಕಾರಿಗಳು, ವುಡ್ಸ್ ಅವರು ಮಾದಕ ದ್ರವ್ಯ ಅಥವಾ ಮದ್ಯ ಸೇವನೆ ಮಾಡಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ರೋಲಿಂಗ್ ಹಿಲ್ಸ್ ಎಸ್ಟೇಟ್ ಮತ್ತು ರಾಂಚೊ ಪಾಲೋಸ್ ವರ್ಡೆಸ್‌ನ ಗಡಿಯಲ್ಲಿರುವ ಲಾಸ್ ಏಂಜಲೀಸ್‌ನ ದಕ್ಷಿಣಕ್ಕೆ ಸುಮಾರು 20 ಮೈಲಿ ದೂರದಲ್ಲಿ ಮಂಗಳವಾರ ಬೆಳಗ್ಗೆ 7: 15ಕ್ಕೆ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
15 ಬಾರಿ ಪ್ರಮುಖ ಗಾಲ್ಫ್ ಚಾಂಪಿಯನ್ಶಿಪ್ ಗೆದ್ದಿರುವ ವುಡ್ಸ್ ಕೊನೆಯ ಬಾರಿಗೆ ಕಳೆದ ವರ್ಷದ ಡಿಸೆಂಬರ್ 20 ರಂದು ಪಿಎನ್‌ಸಿ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.