ಕರ್ನಾಟಕ

karnataka

ETV Bharat / international

ಝೂ ನಲ್ಲಿದ್ದ ಹುಲಿಗೂ ಕೊರೊನಾ ಪಾಸಿಟಿವ್​... ಹೆಚ್ಚಿದ ಆತಂಕ - ಹುಲಿಗೆ ಕೊರೊನಾ ಪಾಸಿಟಿವ್​

ನಾಡಿಯಾ ಎಂಬ ನಾಲ್ಕು ವರ್ಷದ ಮಲಾಯನ್ ಹುಲಿ, ಅವಳ ಸಹೋದರಿ ಹುಲಿ ಅಜುಲ್, ಎರಡು ಅಮುರ್ ಹುಲಿಗಳು ಮತ್ತು ಮೂರು ಆಫ್ರಿಕನ್ ಸಿಂಹಗಳಿಗೆ ಒಣ ಕೆಮ್ಮು ಶುರುವಾಗಿದ್ದು, ಅವುಗಳು ಸಂಪೂರ್ಣವಾಗಿ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ನ್ಯೂಯಾರ್ಕ್​ ನಗರದ ಪ್ರಾಣಿ ಸಂಗ್ರಹಾಲಯಗಳನ್ನು ನಡೆಸುತ್ತಿರುವ ವನ್ಯಜೀವಿ ಸಂರಕ್ಷಣಾ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

tiger
ಹುಲಿ

By

Published : Apr 6, 2020, 10:01 AM IST

ನ್ಯೂಯಾರ್ಕ್(ಯುಎಸ್​ಎ):ಅಮೆರಿಕದ ನ್ಯೂಯಾರ್ಕ್​ನ ಬ್ರಾಂಕ್ಸ್ ಮೃಗಾಲಯದ ಹುಲಿ ಕೊರೊನಾ ಸೋಂಕಿಗೆ ಒಳಗಾಗಿದೆ ಎಂದು ವನ್ಯಜೀವಿ ಸಂರಕ್ಷಣಾ ಸಂಸ್ಥೆ ಹೇಳಿದೆ.

ನಾಡಿಯಾ ಎಂಬ ನಾಲ್ಕು ವರ್ಷದ ಮಲಾಯನ್ ಹುಲಿ, ಅವಳ ಸಹೋದರಿ ಹುಲಿ ಅಜುಲ್, ಎರಡು ಅಮುರ್ ಹುಲಿಗಳು ಮತ್ತು ಮೂರು ಆಫ್ರಿಕನ್ ಸಿಂಹಗಳಿಗೆ ಒಣ ಕೆಮ್ಮು ಶುರುವಾಗಿದ್ದು, ಅವುಗಳು ಸಂಪೂರ್ಣವಾಗಿ ಚೇತರಿಸಿಕೊಳ್ಳುವ ನಿರೀಕ್ಷೆಯಿವೆ ಎಂದು ನ್ಯೂಯಾರ್ಕ್​ ನಗರದ ಪ್ರಾಣಿ ಸಂಗ್ರಹಾಲಯಗಳನ್ನು ನಡೆಸುತ್ತಿರುವ ವನ್ಯಜೀವಿ ಸಂರಕ್ಷಣಾ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಮೃಗಾಲಯದಲ್ಲಿರುವ ಹುಲಿಗೂ ಕೊರೊನಾ ಬಾಧಿಸಲು ಹೇಗೆ ಸಾಧ್ಯ ಎಂಬ ಗೊಂದಲ ಮೂಡೋದು ಸಹಜ. ಸದ್ಯ ಕೊರೊನಾ ರೋಗಲಕ್ಷಣವಿರುವ ಮೃಗಾಲಯ ಸಿಬ್ಬಂದಿಯಿಂದ (ಕೇರ್​ ಟೇಕರ್​) ವೈರಸ್ ಹರಡಿದೆ ಎನ್ನಲಾಗಿದೆ.

ABOUT THE AUTHOR

...view details