ಕರ್ನಾಟಕ

karnataka

ETV Bharat / international

ಮೂವರು ಪೊಲೀಸರ ಮೇಲೆ ಗುಂಡಿನ ದಾಳಿ.. ಕಾರಿನಲ್ಲಿ ದುಷ್ಕರ್ಮಿ ಪರಾರಿ - ಹ್ಯೂಸ್ಟನ್ ಪೊಲೀಸ್ ಇಲಾಖೆ

ಟೆಕ್ಸಾಸ್‌ನ ಹ್ಯೂಸ್ಟನ್ ನಗರದಲ್ಲಿ ವ್ಯಕ್ತಿಯೋರ್ವ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿ, ಗುಂಡಿನ ದಾಳಿ ನಡೆಸಿ, ಮರ್ಸಿಡಿಸ್ ಕಾರಿನಲ್ಲಿ ಪರಾರಿಯಾದ ಘಟನೆ ನಡೆದಿದೆ.

Three police officers were shot in texas
ಟೆಕ್ಸಾಸ್​​ನಲ್ಲಿ ಮೂವರು ಪೊಲೀಸರ ಮೇಲೆ ವ್ಯಕ್ತಿ ಪರಾರಿ

By

Published : Jan 28, 2022, 6:29 AM IST

ಟೆಕ್ಸಾಸ್, ಅಮೆರಿಕ: ಮೂವರು ಪೊಲೀಸ್ ಅಧಿಕಾರಿಗಳ ಮೇಲೆ ಗುಂಡುಹಾರಿಸಿ, ವ್ಯಕ್ತಿಯೊಬ್ಬ ಪರಾರಿಯಾಗಿರುವ ಘಟನೆ ಟೆಕ್ಸಾಸ್‌ನ ಡೌನ್‌ಟೌನ್ ಬಳಿಯ ಹ್ಯೂಸ್ಟನ್ ನಗರದಲ್ಲಿ ನಡೆದಿದೆ ಎಂದು ಹೂಸ್ಟನ್ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

ಮೆಕ್​ಗೋವನ್​ ಸೇಂಟ್​ನ 2100 ಬ್ಲಾಕ್​ ಸಮೀಪದಲ್ಲಿ ಬಿಳಿ ಬಣ್ಣದ ಮರ್ಸಿಡಿಸ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಪೊಲೀಸ್​ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದಾನೆ. ನಂತರ ಮೂವರು ಪೊಲೀಸ್ ಅಧಿಕಾರಿಗಳ ಮೇಲೆ ಗುಂಡು ಹಾರಿಸಿ, ಕಾರಿನಲ್ಲಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಪೊಲೀಸ್ ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮೆಮೊರಿಯಲ್ ಹರ್ಮೆನ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಹ್ಯೂಸ್ಟನ್ ಪೊಲೀಸ್ ಇಲಾಖೆ ಗುರುವಾರ ಟ್ವಿಟರ್ ಮೂಲಕ ತಿಳಿಸಿದೆ. ಅಧಿಕಾರಿಗಳ ಮೇಲೆ ಏಕೆ ಗುಂಡು ಹಾರಿಸಲಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಮೂವರು ಪೊಲೀಸ್ ಅಧಿಕಾರಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಟ್ವಿಟರ್ ಮೂಲಕ ಸ್ಪಷ್ಟನೆ ನೀಡಲಾಗಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details