ವಾಷಿಂಗ್ಟನ್:ಕಪ್ಪು ವರ್ಣೀಯರ ಮೇಲೆ ಅಮೆರಿಕದ ಪೊಲೀಸರ ದೌರ್ಜನ್ಯವನ್ನು ವಿರೋಧಿಸಿ ಸಾವಿರಾರು ಮಂದಿ ಪ್ರತಿಭಟನಾಕಾರರು ವಾಷಿಂಗ್ಟನ್‌ನ ಶ್ವೇತಭವನದ ಬಳಿಯ ಬೀದಿಗಳಲ್ಲಿ ಶಾಂತಿಯುತವಾಗಿ ಸೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಾರ್ಜ್ ಫ್ಲಾಯ್ಡ್ ಅವರ ತವರೂರು ಉತ್ತರ ಕೆರೊಲಿನಾದಲ್ಲಿ ಶೋಕಾಚರಣೆ ನಡೆಯಿತು. ಅಲ್ಲಿನ ಚರ್ಚ್‌ನಲ್ಲಿ ಗೌರವ ಸಲ್ಲಿಸಲು ನೂರಾರು ಶೋಕತಪ್ತರು ಸಾಲುಗಟ್ಟಿ ನಿಂತಿದ್ದರು. ಇದೇ ಸಂದರ್ಭ ಆಕ್ರೋಶಿತರಿಂದ ಪ್ರತಿಭಟನೆ ಕೂಡಾ ನಡೆಯಿತು.