ಕರ್ನಾಟಕ

karnataka

ETV Bharat / international

ಕೃಷಿ ಪದವೀಧರೆಗೆ ₹ 1 ಕೋಟಿ ಸ್ಯಾಲರಿಯ ಉದ್ಯೋಗ.. ಕೆನಡಾಗೆ ಹಾರ್ತಾರಂತೆ ಭಾರತೀಯ ನಾರಿ.. - undefined

ಬದುಕಿನಲ್ಲಿ ಪರಿಶ್ರಮಪಟ್ರೇ ಯಾವುದೇ ರೀತಿ ಸಾಧನೆ ಮಾಡಲು ಸಾಧ್ಯ ಅನ್ನೋದನ್ನ ಹೆಣ್ಣುಮಗಳೊಬ್ಬಳು ತೋರಿಸಿಕೊಟ್ಟಿದ್ದಾಳೆ. ದೇಶದ ಕೃಷಿ ವಿಜ್ಞಾನ ಪದವೀಧರೆ ಕವಿತಾ ಫಮಾನ್‌, ಈಗ ಕೆನಡಾದಲ್ಲಿ ತಮ್ಮ ಮೈಲುಗಲ್ಲು ಸ್ಥಾಪಿಸಲು ಹೊರಟಿದ್ದಾರೆ.

ವಿತಾ ಫಮಾನ್‌

By

Published : Apr 7, 2019, 7:59 PM IST

ಕೆನಡಾ: ಭಾರತದ ಕೃಷಿ ವಿಜ್ಞಾನ ಪದವೀಧರೆ ಈಗ ವಿದೇಶದಲ್ಲಿ ತಮ್ಮ ಮೈಲುಗಲ್ಲು ಸ್ಥಾಪಿಸ ಹೊರಟಿದ್ದಾರೆ. ಓದುವಾಗಲೇ ಮೊದಲ ಉದ್ಯೋಗ ಗಿಟ್ಟಿಸಿದ ಯುವತಿಗೆ ಕೆನಡಾದ ಅಗ್ರಿ ಫಾರ್ಮ್‌ ಕಂಪನಿ 1 ಕೋಟಿ ರೂ. ಸ್ಯಾಲರಿ ಪ್ಯಾಕೇಜ್‌ನ ಆಫರ್‌ ಮಾಡಿದೆ.

ಕವಿತಾ ಫಮಾನ್‌, ಎಂಎಸ್ಸಿ ಅಗ್ರಿಕಲ್ಚರ್‌ನ ಅಂತಿಮ ವರ್ಷದ ವಿದ್ಯಾರ್ಥಿನಿ. ಪಂಜಾಬ್‌ನ ಪಗವಾರಾದ ಲವ್ಲಿ ಪ್ರೊಫೆಷನಲ್‌ ಯುನಿವರ್ಸಿಟೀಸ್‌ ಸ್ಕೂಲ್‌ ಆಫ್‌ ಅಗ್ರಿಕಲ್ಚರ್‌ನಲ್ಲಿ ಓದುತ್ತಿದ್ದಾರೆ. ಬೆಳೆ ವಿಜ್ಞಾನ ವಿಷಯ ಓದುವಾಗಲೇ, ಈಗ ಮಹತ್ವದ ಹುದ್ದೆಗೆ ನೇಮಕವಾಗಿದ್ದಾರೆ. ಕೆನಡಾದ ಅತಿ ದೊಡ್ಡ ಅಗ್ರಿಕಲ್ಚರ್‌ ಫಾರ್ಮ್ ಕಂಪನಿಯಲ್ಲಿ ಕವಿತಾ ಫಮಾನ್‌ ಉತ್ಪಾದನಾ ವ್ಯವಸ್ಥಾಪಕಿ ಹುದ್ದೆ ಗಿಟ್ಟಿಸಿದ್ದಾರೆ. ಕೃಷಿ ರಾಸಾಯನಿಕ ಉತ್ಪನ್ನಗಳ ನಿರ್ಮಾಣದ ಮೇಲುಸ್ತುವಾರಿ ನೋಡಿಕೊಳ್ಳುವ ಜವಾಬ್ದಾರಿ ಹೊರಲಿದ್ದಾರೆ ಭಾರತೀಯ ವನಿತೆ. ಇದೇ ತಿಂಗಳ ಕೊನೆಗೆ ಕೆನಡಾ ಮನಿತೋಬಾ ಪ್ರದೇಶದ ಕಚೇರಿಗೆ ಕವಿತಾ ಶಿಫ್ಟಾಗಲಿದ್ದಾರೆ. ಇಷ್ಟು ವರ್ಷ ಕಣ್ಣಿಗೆ ಎಣ್ಣೆ ಬಿಟ್ಕೊಂಡು ಓದಿದ್ದ ಕಾರಣ, ಪ್ರತಿ ವರ್ಷಕ್ಕೆ 1 ಕೋಟಿ ರೂ. ಸ್ಯಾಲರಿ ಪ್ಯಾಕೇಜ್‌ ಪಡೆದಿದ್ದಾರೆ.

ಪೂರ್ವಭಾವಿ ಟೆಸ್ಟ್‌, ಸಂದರ್ಶನದಲ್ಲಿ ಕವಿತಾ ಮಿಂಚು :

ಕೆನಡಾ ಕಂಪನಿಯ ಅಧಿಕಾರಿಗಳು ನಡೆಸಿದ್ದ ಪೂರ್ವಭಾವಿ ಪರೀಕ್ಷೆ ಹಾಗೂ ಸಂದರ್ಶನ ಎದುರಿಸಿದ್ದ ಕವಿತಾ ಅದರಲ್ಲಿ ಶೈನಾಗಿದ್ದಾರೆ. ಎಲ್ಲದರಲ್ಲೂ ಸ್ಪಷ್ಟ, ನಿಖರ ಉತ್ತರ ನೀಡಿದ್ದರಿಂದ ಕೆನಡಾ ಕಂಪನಿ ಈ ಆಫರ್‌ ಮಾಡಿದೆ. 'ಬಯೋಟೆಕ್ನಾಲಿಯ ಆವಿಷ್ಕಾರಗಳನ್ನ ಡಾಟಾ ಸೈನ್ಸ್‌ಗೆ ಬಳಸಲಾಗುತ್ತಿದೆ. ಕೃಷಿ ಕ್ಷೇತ್ರವನ್ನೂ ತಂತ್ರಜ್ಞಾನ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಅಮೆರಿಕಾ ಮೂಲದ ಮೊನ್‌ಸ್ಯಾಂಟೊ ಅಗ್ರೋಕೆಮಿಕಲ್‌ ಮತ್ತು ಅಗ್ರಿಕಲ್ಚರಲ್‌ ಬಯೋಟೆಕ್ನಾಲಜಿ ಕಂಪನಿ ತಂತ್ರಜ್ಞಾನ ಬಳಕೆಯಲ್ಲಿ ಸಾಕಷ್ಟು ಮುಂದುವರೆದಿದೆ. ನಾನು ಈ ಕಂಪನಿ ಸೇರಲು ಸಾಕಷ್ಟು ಉತ್ಸುಕಳಾಗಿರುವೆ. ಕಂಪನಿಯಲ್ಲಿ ನೈಪುಣ್ಯತೆ ಸಾಧಿಸಲು ಹೆಚ್ಚು ಶ್ರಮಿಸುವೆ' ಅಂತಾ ಕವಿತಾ ಫಮಾನ್‌ ಹೇಳಿದ್ದಾರೆ.

ಕೃಷಿ ವಿಜ್ಞಾನಿಗಳಿಗೆ ದಾರಿದೀಪವಾಗಲಿ ಕವಿತಾ ಸಾಧನೆ :

'ಕವಿತಾ ನಮ್ಮ ವಿವಿಯಲ್ಲಿ ಓದಿರುವ ದೊಡ್ಡ ಸ್ಟಾರ್ಸ್‌ಗಳಲ್ಲಿ ಒಬ್ಬರು. ಹೆಚ್ಚಿನ ಓದು ಮತ್ತು ಪರಿಶ್ರಮವಿದ್ರೇ ಖಂಡಿತಾ ಕೃಷಿ ವಿಜ್ಞಾನ ಕ್ಷೇತ್ರದಲ್ಲೂ ಬೆಟ್ಟದಷ್ಟು ಅವಕಾಶಗಳಿವೆ ಅನ್ನೋದಕ್ಕೆ ವಿದ್ಯಾರ್ಥಿನಿ ಕವಿತಾ ಪಡೆದ ಕೆಲಸವೇ ಸಾಕ್ಷಿ. ಕವಿತಾ ನಡೆದ ದಾರಿಯಲ್ಲೇ ಇನ್ನೂ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಸಾಗುತ್ತಾರೆ ಅನ್ನೋ ವಿಶ್ವಾಸ ನನ್ನದು ಅಂತಾ ವಿವಿಯ ಡೀನ್‌ ಡಾ. ರಮೇಶ್‌ ಕುಮಾರ್‌ ಹೇಳಿದ್ದಾರೆ.

ಕವಿತಾ ಓದಿದ ವಿವಿ ದೇಶದಲ್ಲೇ ಅತ್ಯುತ್ತಮ ಕೃಷಿ ವಿವಿ ಎಂಬ ಖ್ಯಾತಿ ಪಡೆದಿದೆ. ಪ್ರಾಯೋಗಿಕ ಅನುಭವ ನೀಡಲು ಇಡೀ ವಿವಿ1000 ಎಕರೆ ಮೀಸಲಿರಿಸಿದೆ. ಕೃಷಿ ಸಂಶೋಧನೆ ನಡೆಸುವ ವಿದ್ಯಾರ್ಥಿಗಳಿಗೆ ಇದರಿಂದ ಸಾಕಷ್ಟು ನೆರವಾಗಿದೆ.

For All Latest Updates

TAGGED:

ABOUT THE AUTHOR

...view details