ಕರ್ನಾಟಕ

karnataka

ETV Bharat / international

ದಿನಕ್ಕೆ ಲಕ್ಷ ಕೊರೊನಾ ಕೇಸ್ ​: ಈ ಸರ್ಕಾರಕ್ಕೆ ವೈದ್ಯರ ಎಚ್ಚರಿಕೆ

ವಿಶ್ವದಲ್ಲಿ ಸದ್ಯ ಅಮೆರಿಕ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಟಾಪ್​ನಲ್ಲಿದೆ, ಇಲ್ಲಿ ಸರಿ ಸುಮಾರು 26 ಲಕ್ಷಕ್ಕೂ(26,28,091) ಹೆಚ್ಚು ಕೊರೊನಾ ಪಾಸಿಟಿವ್​ ಕೇಸ್​ಗಳಿದ್ದರೆ, 1.27 ಲಕ್ಷ ಜನ ಕೋವಿಡ್​​​​​​- 19ಗೆ ಬಲಿಯಾಗಿದ್ದಾರೆ.

ಕೊರೊನಾ
ಕೊರೊನಾ

By

Published : Jul 1, 2020, 7:20 AM IST

ವಾಷಿಂಗ್ಟನ್​: ಅಮೆರಿಕದಲ್ಲಿ ದಿನವೊಂದಕ್ಕೆ ಹೊಸ ಲಕ್ಷ ಕೊರೊನಾ ಪಾಸಿಟಿವ್​ ಕೇಸ್​ಗಳು ವರದಿ ಆಗಬಹುದು ಎಂದು ಕೊರೊನಾ ಟಾಸ್ಕ್​ ಫೋರ್ಸ್​ ಸದಸ್ಯ ಡಾ. ಆ್ಯಂಟೋನಿ ಫೌಸಿ ಎಚ್ಚರಿಕೆ ನೀಡಿದ್ದಾರೆ.

ವಿಶ್ವದಲ್ಲಿ ಸದ್ಯ ಅಮೆರಿಕ ಕೊರೊನಾ ಹಾವಳಿಯಲ್ಲಿ ಟಾಪ್​ನಲ್ಲಿದೆ, ಇಲ್ಲಿ ಸರಿ ಸುಮಾರು 26 ಲಕ್ಷಕ್ಕೂ(26,28,091) ಹೆಚ್ಚು ಕೊರೊನಾ ಪಾಸಿಟಿವ್​ ಕೇಸ್​ಗಳಿದ್ದರೆ, 1.27 ಲಕ್ಷ ಜನ ಕೋವಿಡ್​​​​​​- 19ಕ್ಕೆ ಬಲಿಯಾಗಿದ್ದಾರೆ.

ಈ ಬಗ್ಗೆ ಮಾತನಾಡಿರುವ ಡಾ. ಫೌಸಿ, ಪ್ರಸ್ತುತ ನಾವು ದಿನವೊಂದಕ್ಕೆ 40 ಸಾವಿರ ಹೊಸ​ ಕೇಸ್​ಗಳನ್ನ ದೃಢಪಡಿಸುತ್ತಿದ್ದೇವೆ. ಈ ಸಂಖ್ಯೆ ಮುಂದೆ 1 ಲಕ್ಷಕ್ಕೆ ಏರಿಕೆಯಾಗಬಹುದು. ಇದು ಕಳವಳಕಾರಿಯಾದ ಸಂಗತಿ ಎಂದು ಡಾ. ಆ್ಯಂಟೋನಿ ತಿಳಿಸಿದ್ದಾರೆ.

ಸದ್ಯ ರೋಗ ಉಲ್ಬಣಗೊಳ್ಳುತ್ತಿದೆ. ನಮ್ಮ ಕ್ರಮಗಳ ಬಗ್ಗೆ ತಮಗೆ ತೃಪ್ತಿ ಇಲ್ಲ. ಈ ಸಾಂಕ್ರಾಮಿಕ ರೋಗ ತಡೆಯಲು ಇನ್ನೂ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಈಗಲೂ ನಾವು ಸಂಪೂರ್ಣವಾಗಿ ರೋಗವನ್ನ ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ.

ABOUT THE AUTHOR

...view details