ಹೈದರಾಬಾದ್:ಅಂಟಾರ್ಕ್ಟಿಕ್ ಐಸ್ ಶೆಲ್ನ 900 ಮೀಟರ್ ಕೆಳಗಿನ ಆಳದಲ್ಲಿ, ವಿಜ್ಞಾನಿಗಳು ಇತ್ತೀಚೆಗೆ ಒಂದು ಕುತೂಹಲಕಾರಿ ಅಂಶವನ್ನು ಆವಿಷ್ಕಾರ ಮಾಡಿದ್ದಾರೆ. ಅದೇನೆಂದರೆ, ಅಲ್ಲಿ ಯಾವುದೋ ಜೀವಿ ವಾಸಿಸುತ್ತಿದೆ ಎಂದು ಕಂಡುಹಿಡಿದಿದ್ದಾರೆ.
ಅಂಟಾರ್ಕ್ಟಿಕಾಗೆ ಸಂಬಂಧಿಸಿದ ಹಲವಾರು ಆವಿಷ್ಕಾರಗಳನ್ನು ಮಾಡಲಾಗಿದೆ. ಐಸ್ ಶೆಲ್ಫ್ ಕರಗುವಿಕೆಯು ಸಮುದ್ರ ಮಟ್ಟ ಏರಿಕೆಗೆ ಕಾರಣವಾಗಿದೆ ಎಂದು ವರದಿಗಳು ಸೂಚಿಸುತ್ತವೆ.
ಅಂಟಾರ್ಟಿಕಾ ದೂರಸ್ಥ ಮತ್ತು ನಿರ್ಜನ ಪ್ರದೇಶವಾಗಿರಬಹುದು. ಆದರೆ ಇದು ಶೀಘ್ರದಲ್ಲೇ ನಮ್ಮೆಲ್ಲರ ಮೇಲೆ ಪರಿಣಾಮ ಬೀರಬಹುದು. ಅಂಟಾರ್ಕ್ಟಿಕ್ ದ್ವೀಪದಲ್ಲಿ ಎರಡನೇ ಅತಿದೊಡ್ಡ ಐಸ್ ಶೆಲ್ಫ್ 2019-2020ರ ಬೇಸಿಗೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಕರಗಲು ಪ್ರಾರಂಭವಾಗಿದೆ ಎಂದು ಅಧ್ಯಯನ ಸೂಚಿಸಿದೆ.
ಸಮುದ್ರ ಮಟ್ಟವು ನಿರೀಕ್ಷಿಸಿದ್ದಕ್ಕಿಂತ ವೇಗವಾಗಿ ಏರಿಕೆಯಾಗುವ ನಿರೀಕ್ಷೆಯಿದ್ದು, ಅಂಟಾರ್ಕ್ಟಿಕ್ ಹಿಮನದಿಗಳು ಮತ್ತು ಮಂಜುಗಡ್ಡೆಯ ಕರಗುವಿಕೆ ಇದಕ್ಕೆ ಪ್ರಮುಖ ಕಾರಣವಾಗಿದೆ. 2002ರಿಂದ ಈ ಖಂಡವು ಪ್ರತಿವರ್ಷ 150 ಬಿಲಿಯನ್ ಮೆಟ್ರಿಕ್ ಟನ್ ಮಂಜುಗಡ್ಡೆಯನ್ನು ಕಳೆದುಕೊಳ್ಳುತ್ತಿದೆ.