Russia - Ukraine War: ಮುಂದುವರಿದ ರಷ್ಯಾ- ಉಕ್ರೇನ್ ಕದನ.. ರಷ್ಯಾಕ್ಕೆ ಆರ್ಥಿಕ ಹೊಡೆತ! - ರಷ್ಯಾ ಉಕ್ರೇನ್ ಯುದ್ಧದ ಇತ್ತೀಚಿನ ಬೆಳವಣಿಗೆಗಳು ಇಂತಿವೆ
ರಷ್ಯಾವು ಉಕ್ರೇನ್ ವಿರುದ್ಧ ತನ್ನ ಹೋರಾಟ ತೀವ್ರಗೊಳಿಸಿದ್ದು, ನಿನ್ನೆ ನಡೆದ ಪ್ರಮುಖ ಬೆಳವಣಿಗೆಗಳ ಮಾಹಿತಿ ಇಲ್ಲಿದೆ ನೋಡಿ.
ರಷ್ಯಾ-ಉಕ್ರೇನ್ ಯುದ್ಧ
ವಾಷಿಂಗ್ಟನ್: ರಷ್ಯಾವು ಉಕ್ರೇನ್ ಮೇಲೆ ದಾಳಿ ಮುಂದುವರೆಸಿದೆ. ಸೈನಿಕರು ಸೇರಿದಂತೆ ಅನೇಕ ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಇಲ್ಲಿಯವರೆಗೆ ನಡೆದ ರಷ್ಯಾ ಉಕ್ರೇನ್ ಯುದ್ಧದ ಪ್ರಮುಖ ಬೆಳವಣಿಗೆಗಳನ್ನ ನೋಡುವುದಾದರೆ,
- ರಷ್ಯಾದಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ನೆಟ್‌ಫ್ಲಿಕ್ಸ್ ಹೇಳಿದೆ.
- ಉಕ್ರೇನ್ ಮೇಲೆ ಮಾಸ್ಕೋ ನಡೆಸಿದ ಆಕ್ರಮಣವನ್ನು ಪ್ರತಿಭಟಿಸಿ ನೆಟ್ ಫ್ಲಿಕ್ಸ್ ರಷ್ಯಾದಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ ಎಂದು ಯುಎಸ್ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.
- ಯುಎಸ್ ಮೂಲದ ನೆಟ್ ಫ್ಲಿಕ್ಸ್ ವೇದಿಕೆ ಈಗಾಗಲೇ ಈ ವಾರದ ಆರಂಭದಲ್ಲಿ ರಷ್ಯಾದಲ್ಲಿ ತನ್ನ ಸ್ವಾಧೀನಗಳನ್ನು ಮತ್ತು ಮೂಲ ಕಾರ್ಯಕ್ರಮಗಳ ಉತ್ಪಾದನೆಯನ್ನು ನಿಲ್ಲಿಸಿತ್ತು.
- ರಷ್ಯಾ ಸರ್ಕಾರದ ದಬ್ಬಾಳಿಕೆಯಿಂದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ರಷ್ಯಾ ಬಳಕೆದಾರರು ಹೊಸ ವಿಡಿಯೋಗಳನ್ನು ಪೋಸ್ಟ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ನ್ಯೂಯಾರ್ಕ್ ಟಿಕ್‌ಟಾಕ್ ಭಾನುವಾರ ಹೇಳಿದೆ.
- ರಷ್ಯಾ ಮತ್ತು ಉಕ್ರೇನ್ ಮಧ್ಯೆ ತೀವ್ರ ಸಂಘರ್ಷವಾಗುತ್ತಿರುವ ಹೊತ್ತಿನಲ್ಲಿ ಅನೇಕ ಸೋಷಿಯಲ್ ಮೀಡಿಯಾಗಳು ತಮ್ಮ ನಿಲುವನ್ನು ಪ್ರದರ್ಶಿಸುತ್ತಿವೆ. ಫೇಸ್‌ಬುಕ್, ಟ್ವಿಟರ್ ಈಗಾಗಲೇ ತಮ್ಮ ವೇದಿಕೆಗಳಲ್ಲಿ ರಷ್ಯನ್ ಮೀಡಿಯಾಗಳನ್ನು ನಿರ್ಬಂಧಿಸಿವೆ. ಅದೇ ರೀತಿ ಫೆ.26 ರಿಂದ ಗೂಗಲ್ ತನ್ನ ವೇದಿಕೆಯಲ್ಲಿ ರಷ್ಯಾ ಸ್ಟೇಟ್ ಮೀಡಿಯಾ ಆರ್ ಟಿ ಮತ್ತು ರಷ್ಯನ್ ಚಾನೆಲ್‌ಗಳನ್ನು ನಿರ್ಬಂಧಿಸಿವೆ. ಹಾಗೆಯೇ ಈ ಮಾಧ್ಯಮಗಳು ಹಣಗಳಿಸುವ ಕಂಟೆಂಟ್ ಕೂಡ ಸ್ಥಗಿತಗೊಳಿಸಲಾಗಿದೆ.
- ಅಮೆರಿಕನ್ ಎಕ್ಸ್‌ಪ್ರೆಸ್ ಸಹ ರಷ್ಯಾ ಮತ್ತು ಬೆಲಾರಸ್‌ನಲ್ಲಿನ ತನ್ನ ಎಲ್ಲ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಜಾಗತಿಕವಾಗಿ ನೀಡಲಾದ ಅಮೆರಿಕನ್ ಎಕ್ಸ್‌ಪ್ರೆಸ್ ಕಾರ್ಡ್‌ಗಳು ಇನ್ನು ಮುಂದೆ ರಷ್ಯಾದ ವ್ಯಾಪಾರಿಗಳು ಅಥವಾ ಎಟಿಎಂಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
- ಇಸ್ರೇಲ್‌ನ ಪ್ರಧಾನ ಮಂತ್ರಿ ನಿನ್ನೆ ಸಂಜೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಫೋನ್ ಮೂಲಕ ಮಾತನಾಡಿದ್ದಾರೆ. ಈ ವೇಳೆ ಉಕ್ರೇನ್‌ನ ಮೇಲೆ ರಷ್ಯಾ ಮಾಡುತ್ತಿರುವ ಆಕ್ರಮಣದ ಕುರಿತು ಚರ್ಚಿಸಲಾಗಿದೆ.
- ಕಳೆದ ವಾರ ರಷ್ಯಾ ವಶಪಡಿಸಿಕೊಂಡ ಉಕ್ರೇನ್‌ನ ಅತಿದೊಡ್ಡ ಝಪೊರಿಝರಾ ಪರಮಾಣು ಸ್ಥಾವರದ ಮೇಲೆ ರಷ್ಯಾದ ಪಡೆಗಳು ತಮ್ಮ ಹಿಡಿತವನ್ನು ಬಿಗಿಗೊಳಿಸುತ್ತಿವೆ ಎಂದು ಆಸ್ಟ್ರಿಯಾ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಹೇಳಿದೆ.
- ರಷ್ಯಾ ಆಕ್ರಮಣ ಪ್ರಾರಂಭವಾದ ನಂತರ ಉಕ್ರೇನ್ನಿಂದ ಸ್ಥಳಾಂತರಿಸಲ್ಪಟ್ಟ 100 ಉಕ್ರೇನಿಯನ್ ಯಹೂದಿ ಅನಾಥರ ಗುಂಪು ಇಸ್ರೇಲ್‌ಗೆ ಬಂದಿಳಿದಿದೆ ಎಂದು ಜೆರುಸಲೆಮ್ ತಿಳಿಸಿದೆ.
- ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನ್ಯಾಟೋ ದೇಶಗಳಿಗೆ ಪದೇ ಪದೆ ತಮ್ಮ ದೇಶದ ಮೇಲೆ ನಡೆಯುತ್ತಿರುವ ರಷ್ಯಾದ ಆಕ್ರಮಣವನ್ನು ನಿಲ್ಲಿಸುವಂತೆ ಮನವಿ ಮಾಡಿ, ನಿಷೇಧ ಹೇರುವಂತೆ ಕರೆ ನೀಡಿದ್ದಾರೆ.
- ಫೆ. 24 ರಂದು ರಷ್ಯಾದ ಆಕ್ರಮಣ ಪ್ರಾರಂಭವಾದಾಗಿನಿಂದ ಉಕ್ರೇನ್‌ನಲ್ಲಿ 364 ನಾಗರಿಕರು ಸಾವನ್ನಪ್ಪಿದ್ದಾರೆ. ಹಾಗೂ ಶನಿವಾರ ಮಧ್ಯರಾತ್ರಿ ವೇಳೆಗೆ 759ಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ ಎಂದು ಯುಎನ್ ಮಾನವ ಹಕ್ಕುಗಳ ಕಚೇರಿ ಹೇಳಿದೆ.
Last Updated : Mar 7, 2022, 9:09 AM IST