ವಾಷಿಂಗ್ಟನ್: ಆಸ್ಕರ್ ನಾಮನಿರ್ದೇಶಿತ ಹಾಲಿವುಡ್ ಚಿತ್ರ 'ದಿ ಕಿಡ್ಸ್ ಆರ್ ಆಲ್ ರೈಟ್'ನಲ್ಲಿ ನಟಿಸಿದ್ದ ನಟ ಎಡ್ಡಿ ಹ್ಯಾಸೆಲ್ ತಮ್ಮ 30ನೇ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದಾರೆ. ಆದರೆ ಇದು ಆಕಸ್ಮಿಕ ಸಾವಲ್ಲ, ನಟನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಹಾಲಿವುಡ್ ಯುವ ನಟನ ಭೀಕರ ಹತ್ಯೆ.. ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು - ದಿ ಹಾಲಿವುಡ್ ರಿಪೋರ್ಟ್
ಹಾಲಿವುಡ್ ನಟ ಎಡ್ಡಿ ಹ್ಯಾಸೆಲ್ನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಹ್ಯಾಸೆಲ್, ಆಸ್ಕರ್ ನಾಮನಿರ್ದೇಶಿತ 'ದಿ ಕಿಡ್ಸ್ ಆರ್ ಆಲ್ ರೈಟ್' ಸಿನಿಮಾದಲ್ಲಿ ನಟಿಸಿದ್ದರು.
ಭಾನುವಾರ ಬೆಳಗ್ಗೆ ಟೆಕ್ಸಾಸ್‌ನಲ್ಲಿ ಘಟನೆ ನಡೆದಿದ್ದು, ಹ್ಯಾಸೆಲ್ ನಿಧನರಾಗಿದ್ದಾಗಿ ನಟನ ಮ್ಯಾನೇಜರ್ ಅಮೆರಿಕದ ಡಿಜಿಟಲ್ ಸುದ್ದಿ ಮಾಧ್ಯಮ 'ದಿ ಹಾಲಿವುಡ್ ರಿಪೋರ್ಟ್'ಗೆ ಖಚಿತಪಡಿಸಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
1990ರ ಜುಲೈ 16 ರಂದು ಟೆಕ್ಸಾಸ್‌ನಲ್ಲಿ ಜನಿಸಿದ ಹ್ಯಾಸೆಲ್, ಬಾಲನಟನಾಗಿ 2000 ರಿಂದ 2010ರ ವರೆಗೆ ಕಿರುತರೆಯಲ್ಲಿ ಮಿಂಚಿದ್ದರು. ಬಳಿಕ 2010ರಲ್ಲಿ ಬಿಡುಗಡೆಯಾದ 'ದಿ ಕಿಡ್ಸ್ ಆರ್ ಆಲ್ ರೈಟ್' ಸಿನಿಮಾದಲ್ಲಿ ಕ್ಲೇ ಎಂಬ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರ ಆಸ್ಕರ್ ಪ್ರಶಸ್ತಿಗೆ ಕೂಡ ನಾಮನಿರ್ದೇಶನಗೊಂಡಿತ್ತು. ಇವರು ಅನೇಕ ಟಿವಿ ಸಿರೀಸ್, ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.