ಕರ್ನಾಟಕ

karnataka

ETV Bharat / international

ಥ್ಯಾಂಕ್ಯೂ  ಇಂಡಿಯಾ... ಭಾರತದ ಸೌಂದರ್ಯಕ್ಕೆ ಇವಾಂಕಾ ಫಿದಾ, ಇನ್​​ಸ್ಟಾಗ್ರಾಮ್​ನಲ್ಲಿ ಫೋಟೋ ಶೇರ್​! - ಇವಾಂಕಾ ಟ್ರಂಪ್​

ಡೊನಾಲ್ಡ್ ಟ್ರಂಪ್​ ಜತೆ ಭಾರತದ ಪ್ರವಾಸ ಕೈಗೊಂಡಿದ್ದ ಇವಾಂಕಾ ಟ್ರಂಪ್​ ಅಮೆರಿಕಕ್ಕೆ ವಾಪಸ್​ ಆಗಿದ್ದು, ಇದೀಗ ಥ್ಯಾಂಕ್ಯೂ ಇಂಡಿಯಾ ಎಂದು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.

Ivanka Trump
Ivanka Trump

By

Published : Feb 26, 2020, 10:13 PM IST

ನ್ಯೂಯಾರ್ಕ್​​: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಜತೆ ಭಾರತಕ್ಕೆ ಆಗಮಿಸಿದ್ದ ಪುತ್ರಿ ಇವಾಂಕಾ ಟ್ರಂಪ್​​ ಹೆಚ್ಚು ಸುದ್ದಿಯಲ್ಲಿದ್ದು, ತಾವು ಹಾಕಿಕೊಂಡಿದ್ದ ಡ್ರೆಸ್​​ನಿಂದಲೇ ಎಲ್ಲರ ಮನ ಗೆದ್ದಿದ್ದರು.

ಅಮೆರಿಕಕ್ಕೆ ವಾಪಸ್​ ಆಗಿರುವ ಇವಾಂಕಾ ಇದೀಗ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಭಾರತ ಪ್ರವಾಸದ ಫೋಟೋ ಶೇರ್​ ಮಾಡಿದ್ದು, ಥ್ಯಾಂಕ್ಯೂ ಇಂಡಿಯಾ ಎಂದು ತಲೆ ಬರಹ ನೀಡಿದ್ದಾರೆ.

38 ವರ್ಷದ ಇವಾಂಕಾ ಇನ್​ಸ್ಟಾಗ್ರಾಮ್​ನಲ್ಲಿ 6 ಮಿಲಿಯನ್​ ಫಾಲೋವರ್ಸ್​ ಹೊಂದಿದ್ದು, ಅನೇಕ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಆಗ್ರಾದ ತಾಜ್​ಮಹಲ್​​, ರಾಷ್ಟ್ರಪತಿ ಭವನ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋ ಶೇರ್​ ಮಾಡಿದ್ದಾರೆ.

ಎರಡನೇ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ಇವಾಂಕಾ ಮೊದಲ ದಿನವೇ ಕೆಂಪು ಬಣ್ಣದ ಸ್ಕರ್ಟ್​ ಹಾಕಿಕೊಂಡು ಗಮನ ಸೆಳೆದರೆ, ಎರಡನೇ ದಿನ ಶೆರ್ವಾನಿ ಹಾಕಿಕೊಂಡು ಎಲ್ಲರ ಮನಗೆದ್ದಿದ್ದರು.

ABOUT THE AUTHOR

...view details