ನೈಸರ್ಗಿಕ ವಿಕೋಪಗಳು ಭೀಕರವಾಗಿರುತ್ತವೆ. ಸೈಕ್ಲೋನ್, ಚಂಡಮಾರುತ, ಭೂಕಂಪ, ಜಾಲ್ವಾಮುಖಿಗಳ ರೌದ್ರತೆಯನ್ನು ಅಳೆಯುವುದಕ್ಕೆ ಸಾಧ್ಯವೇ ಇರುವುದಿಲ್ಲ. ನೈಸರ್ಗಿಕ ವಿಕೋಪಗಳಿಗೆ ಸಿಲುಕಿದರೆ ಧ್ವಂಸವಾಗುವುದಂತೂ ಗ್ಯಾರಂಟಿ. ಟಾರ್ನೆಡೋಗಳ ಬಗ್ಗೆ ನೀವು ಕೇಳಿರಬಹುದು. ಟಾರ್ನೆಡೋ ಎಂದರೆ ಭೀಕರವಾದ ಸುಂಟರಗಾಳಿ.
ಟಾರ್ನೆಡೋ ಭೀಕರವಾಗಿದ್ದರೂ, ಆರ್ಭಟ ಪ್ರದರ್ಶಿಸಿದರೂ, ಪಿಕಪ್ ವಾಹನ ಒಂದು ಸಲೀಸಾಗಿ ಪಾರಾಗಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಮೆರಿಕದ ಟೆಕ್ಸಾಸ್ನಲ್ಲಿ ಈ ಘಟನೆ ನಡೆದಿದೆ. ಟಾರ್ನೆಡೋದ ಅಬ್ಬರಕ್ಕೆ ಪಿಕಪ್ ವಾಹನ ಕೂಡ ಗಿರಗಿರನೇ ವೃತ್ತಕಾರದಲ್ಲಿ ಸುತ್ತಿ, ಪಲ್ಟಿಯಾಗಿದ್ದು, ನಂತರ ಸಾಮಾನ್ಯ ಸ್ಥಿತಿಗೆ ಮರಳಿದೆ.
ಟಾರ್ನೆಡೋ ಮರೆಯಾದ ಬಳಿಕ ಚಾಲಕ ಸಾಮಾನ್ಯನಂತೆ ವಾಹನವನ್ನು ಅನ್ನು ಚಾಲನೆ ಮಾಡಿದ್ದಾನೆ. ರಿಲೇ ಲಿಯಾನ್ ಅವರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದೇ ಟಾರ್ನೆಡೋ ಮರಗಳನ್ನು ಉರುಳಿಸಿ, ಮನೆಗಳನ್ನು ಧ್ವಂಸ ಮಾಡಿದೆ. ಲಿಯಾನ್ ಎಂಬಾತ ಈ ಪಿಕಪ್ ವಾಹನದಲ್ಲಿದ್ದು, ನಾನು ಬದುಕಿದ್ದೇನೆ ಎಂದು ನಂಬಲು ಇನ್ನೂ ಸಾಧ್ಯವಾಗುತ್ತಿಲ್ಲ.