ವಾಷಿಂಗ್ಟನ್ (ಯುಎಸ್):ಅಮೆರಿಕಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಅಧಿಕೃತ ನಿವಾಸವಾದ ಯುಎಸ್ ನೇವಲ್ ಅಬ್ಸರ್ವೇಟರಿಯ ಹೊರಗೆ ಟೆಕ್ಸಾಸ್ ಮೂಲದ ವ್ಯಕ್ತಿಯನ್ನು ವಾಷಿಂಗ್ಟನ್ ಡಿಸಿ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಬಂಧಿತನ ವಾಹನದಿಂದ ಬಂದೂಕು ಮತ್ತು ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಾಷಿಂಗ್ಟನ್‌ನ ಮೆಟ್ರೋಪಾಲಿಟನ್ ಪೊಲೀಸರ ಹೇಳಿಕೆ ಉಲ್ಲೇಖಿಸಿ, ಸಿಎನ್‌ಎನ್ ವರದಿ ಮಾಡಿದೆ. ಅಧಿಕಾರಿಗಳು ಮಧ್ಯಾಹ್ನ 12. 12 ರ ಸುಮಾರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಟೆಕ್ಸಾಸ್ ಮೂಲದ ವ್ಯಕ್ತಿಯನ್ನು ಕಮಲಾ ಹ್ಯಾರಿಸ್ ಮನೆಯ ಬಳಿಯಿಂದ ಗುಪ್ತಚರ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.