ನ್ಯಾಶ್ವಿಲ್ಲೆ (ಅಮೆರಿಕ):ಟೆನ್ನೆಸ್ಸಿಯಲ್ಲಿ ಪ್ರವಾಹದ ಅಬ್ಬರ ಜೊರಾಗಿದ್ದು ಆರು ಜನ ಮೃತ ಪಟ್ಟಿದ್ದು, ರಾಜ್ಯದ ಕೆಲವು ಭಾಗಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ ಎಂದು ಅಲ್ಲಿನ ಅಧಿಕಾರಿಗಳು ಖಚಿತ ಪಡಿಸಿದ್ದಾರೆ.
ನ್ಯಾಶ್ವಿಲ್ಲೆಯ ನೆಲೆಯಾದ ಡೇವಿಡ್ಸನ್ ಕೌಂಟಿಯಲ್ಲಿ 4 ಜನರು ಮತ್ತು ಚೀಥಮ್ ಮತ್ತು ಹಾಕಿನ್ಸ್ ಕೌಂಟಿಗಳಲ್ಲಿ ತಲಾ ಒಂದು ಸಾವು ಸಂಭವಿಸಿದೆ ಎಂದು ಅಲ್ಲಿನ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಶನಿವಾರದಿಂದ ಭಾನುವಾರದವರೆಗೆ ನ್ಯಾಶ್ವಿಲ್ಲೆಯಲ್ಲಿ 7 ಸೆಂ.ಮೀ ಹೆಚ್ಚು ಮಳೆಯಾಗಿದೆ, ಮತ್ತು ಇನ್ನೂ ಕೆಲವು ಪ್ರದೇಶಗಳಲ್ಲಿ 8 ಸೆಂ.ಮೀಗಿಂತ ಹೆಚ್ಚು ಮಳೆಯಾಗಿದೆ ಎಂದು ರಾಷ್ಟ್ರೀಯ ಹವಾಮಾನ ಸೇವಾ ವಿಭಾಗ ಮಾಹಿತಿ ಹಂಚಿಕೊಂಡಿದೆ.