ಮಿನ್ನಿಯಾಪೋಲಿಸ್(ಯುಎಸ್ಎ):ಪೊಲೀಸರಿಂದಜಾರ್ಜ್ ಫ್ಲಾಯ್ಡ್ ಮತ್ತು ಕಪ್ಪು ಪುರುಷರ ಹತ್ಯೆಯನ್ನು ವಿರೋಧಿಸಿ ಅಮೆರಿಕದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ದೇಶಾದ್ಯಂತ ಉದ್ರಿಕ್ತರಿಂದ ಪ್ರತಿಭಟನೆ ಭುಗಿಲೆದ್ದಿದ್ದು, ಶನಿವಾರ ನ್ಯೂಯಾರ್ಕ್ನಿಂದ ತುಲ್ಸಾ ಹಾಗೂ ಲಾಸ್ ಏಂಜಲೀಸ್ವರೆಗೆ ಪ್ರತಿಭಟನೆ ಕಾವು ಬೆಳೆದಿದೆ. ಈ ವೇಳೆ ಪ್ರತಿಭಟನಾಕಾರರು ಪೊಲೀಸ್ ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ. ಲಾಕ್ಡೌನ್ ನಡುವೆಯೂ ಅಶಾಂತಿ ವಾತಾವರಣ ನಿರ್ಮಾಣವಾಗಿದ್ದು, ದೇಶದ ಹಲವೆಡೆ ಹಲವರಿಗೆ ಗಾಯಗಳಾದ ಪ್ರಕರಣ ವರದಿಯಾಗಿದೆ.
ಕಪ್ಪು ವ್ಯಕ್ತಿ ಫ್ಲಾಯ್ಡ್‌ನ ಕುತ್ತಿಗೆಯನ್ನು ಪೊಲೀಸ್ ಅಧಿಕಾರಿ ಎಂಟು ನಿಮಿಷಗಳಿಗಿಂತ ಹೆಚ್ಚು ಕಾಲ ಮೊಣಕಾಲಿನಿಂದ ಒತ್ತಿದ್ದರಿಂದ ಜಾರ್ಜ್ ಫ್ಲಾಯ್ಡ್ ಎಂಬಾತ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆ ಮಿನ್ನಿಯಾಪೋಲಿಸ್‌ನಲ್ಲಿ ಪ್ರಾರಂಭವಾದ ಪ್ರತಿಭಟನೆಗಳಲ್ಲಿ ನಗರದ ಹಲವೆಡೆಗಳಲ್ಲಿ ಹಾನಿಯಾಗಿದೆ. ಹಲವು ಕಟ್ಟಡಗಳಿಗೆ ಉದ್ರಿಕ್ತರು ಬೆಂಕಿ ಹಚ್ಚಿದೆ, ಕಿಟಕಿಗಳನ್ನು ಒಡೆದು ಹಾಕಿದ್ದಾರೆ. ಪೊಲೀಸರಿಂದಲೇ ವ್ಯಕ್ತಿಯೋರ್ವ ಸಾವನ್ನಪ್ಪಿರುವುದು ಪ್ರಮುಖ ರಾಷ್ಟ್ರೀಯ ವಿದ್ಯಮಾನವಾಗಿ ಮಾರ್ಪಟ್ಟಿದೆ.