ಸ್ಮಿರ್ನಾ (ಅಮೆರಿಕ): ಶನಿವಾರ ನಡೆದಿದ್ದ ಲಘು ವಿಮಾನ ಪತನದಲ್ಲಿ ಟಾರ್ಜನ್ ಖ್ಯಾತಿಯ ನಟ ಜೋ ಲಾರಾ (58) ಮತ್ತು ಅವರ ಪತ್ನಿ ಮೃತಪಟ್ಟಿರುವುದು ತಿಳಿದು ಬಂದಿದೆ.
ಅಮೆರಿಕದ ಸ್ಮಿರ್ನಾ ವಿಮಾನ ನಿಲ್ದಾಣದಿಂದ ಪಾಮ್ ಬೀಚ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ 'ಸೆಸ್ನಾ C501' ಜೆಟ್ನಲ್ಲಿ ಏಳು ಜನರಿದ್ದರು. ಟೆನ್ನೆಸ್ಸೀಯ ಪರ್ಸಿ ಪ್ರೀಸ್ಟ್ ಸರೋವರಕ್ಕೆ ಜೆಟ್ ಅಪ್ಪಳಿಸಿದ್ದು, ಯಾರೊಬ್ಬರೂ ಬದುಕುಳಿದಿರುವುದು ಅನುಮಾನವೆಂದು ನಿನ್ನೆ ಅಧಿಕಾರಿಗಳು ತಿಳಿಸಿದ್ದರು.
ಇಂದು ಬೆಳಗ್ಗೆವರೆಗೂ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಜೆಟ್ನಲ್ಲಿದ್ದ 7 ಮಂದಿಯೂ ಸಾವನ್ನಪ್ಪಿರುವುದನ್ನು ಯುಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ದೃಢಪಡಿಸಿದ್ದಾರೆ. ಅದೇ ವಿಮಾನದಲ್ಲಿದ್ದ ನಟ ಜೋ ಲಾರಾ ಹಾಗೂ ಅವರ ಪತ್ನಿ ದುರಂತ ಅಂತ್ಯ ಕಂಡಿದ್ದಾರೆ.