ನ್ಯೂಯಾರ್ಕ್ (ಅಮೆರಿಕ):ತಾಲಿಬಾನ್, ಆಫ್ಘನ್ ಮಣ್ಣನ್ನು ಭಯೋತ್ಪಾದನೆಗೆ ಬಳಸದಂತೆ ಬದ್ಧತೆ ತೋರಿಸಬೇಕಿದ್ದು, ಅಂತಹ ವಾತಾವರಣ ಸಹ ಸೃಷ್ಟಿಯಾಗಬೇಕು ಎಂದು ಭಾರತ ಪ್ರತಿಪಾದಿಸಿದೆ.
ಜಿ -20 ವಿದೇಶಾಂಗ ಮಂತ್ರಿಗಳ ಸಭೆಯನ್ನುದ್ದೇಶಿಸಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮಾತನಾಡಿದರು. ಆಫ್ಘನ್ ಅನ್ನು ಯಾವುದೇ ದೇಶಗಳ ವಿರುದ್ಧವಾಗಿ ಬಳಸುವುದಿಲ್ಲ ಎಂದು ತಾಲಿಬಾನ್ ಹೇಳಿದೆ. ತಾಲಿಬಾನ್ ಈ ಹೇಳಿಕೆಯನ್ನು ಕಾರ್ಯಗತಗೊಳಿಸಬೇಕು. ಆಫ್ಘನ್ ಸಮಾಜದ ಎಲ್ಲಾ ವರ್ಗಗಳ ಪ್ರತಿನಿಧಿಯನ್ನು ಒಳಗೊಂಡ ವಿಶಾಲ ಅಂತರ್ಗತ ಪ್ರಕ್ರಿಯೆಯನ್ನು ಜಗತ್ತು ನಿರೀಕ್ಷಿಸುತ್ತದೆ ಎಂದು ಜೈ ಶಂಕರ್ ಹೇಳಿದ್ದಾರೆ.