ವಾಷಿಂಗ್ಟನ್, ಅಮೆರಿಕ:ನಮ್ಮ ಶಸ್ತ್ರಾಸ್ತ್ರಗಳನ್ನು ಆಫ್ಘನ್ ಪಡೆಗಳಿಂದ ತಾಲಿಬಾನ್ ವಶಕ್ಕೆ ಪಡೆದುಕೊಂಡಿದ್ದು, ಅವುಗಳನ್ನು ನಮಗೆ ತಾಲಿಬಾನ್ ಹಿಂದಿರುಗಿಸುತ್ತದೆ ಎಂಬ ನಿರೀಕ್ಷೆಯಿಲ್ಲ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಜೇಕ್ ಸುಲ್ಲಿವಾನ್ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೇಕ್ ಸುಲ್ಲಿವಾನ್ ತಾಲಿಬಾನ್ ಬಳಿ ಸಾಕಷ್ಟು ಅಮೆರಿಕದ ಶಸ್ತ್ರಗಳು ಇವೆ. ಅಫ್ಘಾನ್ ಸೇನೆಯಿಂದ ಆ ಶಸ್ತ್ರಗಳನ್ನು ಜಪ್ತಿ ಮಾಡಲಾಗಿದೆ. ಅವುಗಳನ್ನು ತಾಲಿಬಾನ್ ಅಮೆರಿಕಕ್ಕೆ ಹಿಂದಿರುಗಿಸಲಿ ಎಂದು ನಾವು ನಿರೀಕ್ಷಿಸುವುದಿಲ್ಲ ಎಂದಿದ್ದಾರೆ.
ನಮಗೆ ಖಂಡಿತವಾಗಿಯೂ ಈ ಬಗ್ಗೆ ಸರಿಯಾದ ಅಂಕಿ ಅಂಶಗಳು ತಿಳಿದಿಲ್ಲ ಎಂದಿರುವ ಅವರು ಅಮೆರಿಕದ ಅಧ್ಯಕ್ಷ ಜೋ ಬೈಡನ್ ತಾವು ಈಗ ನಡೆಯುತ್ತಿರುವ ಅಫ್ಘಾನಿಸ್ತಾನ ಸಂಬಂಧಿ ಎಲ್ಲಾ ನಿರ್ಧಾರಗಳಿಗೆ ತಾವೇ ಹೊಣೆ ಹೊರುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.